ಬೆಳಗ್ಗಿನ ಉಪಹಾರ ಸೇವನೆಯ ಪ್ರಯೋಜನಗಳು

ಬೆಳಗ್ಗೆ ಉಪಹಾರ ಸೇವನೆ ಮಾಡದಿದ್ದರೆ ಚಯಾಪಚಯ ಕ್ರಿಯೆ ಕಡಿಮೆಯಾಗುತ್ತದೆ. ದೇಹದ ತೂಕ ಹೆಚ್ಚಾಗುತ್ತದೆ. ಹೀಗಾಗಿ ಬೆಳಗ್ಗಿನ ಉಪಹಾರವನ್ನು ಬಿಡಬೇಡಿ.

ಉಪಹಾರ ಸೇವನೆ ಮಾಡದಿದ್ದರೆ ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರ, ತಲೆನೋವು, ಮೈಗ್ರೇನ್, ಅನಿಯಮಿತ ಪಿರಿಯೆಡ್ಸ್, ವಿಟಮಿನ್ ಬಿ 12, ವಿಟಮಿನ್ ಡಿ ಕೊರತೆ, ಪ್ರೋಟೀನ್ ಕೊರತೆ ಉಂಟಾಗುತ್ತದೆ.

ನಿಯಮಿತ ಉಪಹಾರವನ್ನು ಸೇವಿಸುವುದರಿಂದ ಹೃದಯದ ತೊಂದರೆಗಳು ಇರುವುದಿಲ್ಲ.

ಬೆಳಗ್ಗಿನ ಉಪಹಾರ ಸೇವನೆಯಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಒತ್ತಡ ದೂರವಾಗುತ್ತದೆ.

ಆರೋಗ್ಯಕರ ಬೆಳಗ್ಗಿನ ಉಪಹಾರ ಸೇವನೆಯಿಂದ ಮಧುಮೇಹ ಅಪಾಯ ಕಡಿಮೆ ಇರುತ್ತದೆ.

ರಕ್ತದ ಸಕ್ಕರೆ ಮತ್ತು ರಕ್ತದೊತ್ತಡದ ಮಟ್ಟವನ್ನು ಸ್ಥಿರವಾಗಿಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಉಪಹಾರ ಸಹಾಯಕವೆಂದು ಅಧ್ಯಯನಗಳು ಹೇಳುತ್ತವೆ.