ಪುದೀನಾ ಎಲೆಯ ಪ್ರಯೋಜನಗಳು
ಪುದೀನಾ ಎಲೆಗಳು ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿಯಾಗಿದೆ.
ಪುದೀನಾ ಸೊಪ್ಪು ತಲೆನೋವು ಶಮನಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಪುದೀನಾ ಸೊಪ್ಪು ಮೂಗು, ಗಂಟಲು, ಶ್ವಾಸಕೋಶವನ್ನು ಸ್ವಚ್ಛಗೊಳಿಸುವ ಮೂಲಕ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಲ್ಲಿ ಉರಿಯೂತ ನಿವಾರಕ ಗುಣ ಇದೆ.
ಪುದೀನಾ ಸೇವನೆಯಿಂದ ಜೀರ್ಣಕ್ರಿಯೆ ಕಿಣ್ವಗಳು ಸಕ್ರಿಯವಾಗುತ್ತವೆ. ಇದು ಚಯಾಪಚಯ ಕ್ರಿಯೆ ಸುಧಾರಿಸುತ್ತದೆ, ಅಂತಿಮವಾಗಿ ದೇಹದ ತೂಕ ನಷ್ಟಕ್ಕೆ ಸಹಾಯಕವಾಗುತ್ತದೆ.
ಪುದೀನಾ ಸೊಪ್ಪು ಜಗಿಯುವುದರಿಂದ ಬಾಯಿ ವಾಸನೆ ಹೋಗಲಾಡಿಸಬಹುದು. ಹಲ್ಲುಗಳು ಕೂಡ ಸ್ವಚ್ಛವಾಗುತ್ತವೆ.
ಪುದೀನಾ ಎಲೆಗಳನ್ನು ಸೋಪ್ ಮತ್ತು ಫೇಸ್ ವಾಶ್ ಗಳಲ್ಲಿ ಬಳಸಲಾಗುತ್ತದೆ. ಇದರ ಬಳಿಕೆಯಿಂದ ತ್ವಚೆಯ ಮೇಲಿನ ಕೊಳೆ ನಿವಾರಣೆಯಾಗಿ ತೇವಾಂಶ ಹೊಳೆಯುತ್ತದೆ.