ಆರೋಗ್ಯಕರ ಕೂದಲಿಗಾಗಿ ಸೂಕ್ತ ಆಹಾರಗಳು

ಕೂದಲು ಉದುರುವಿಕೆ ಸಮಸ್ಯೆ ಇಲ್ಲದೆ, ಹೊಳೆಯುವ ಕೂದಲು ಬೇಕು  ಎಂಬುದು ಎಲ್ಲರ ಕನಸು. 

ಆದರೆ ಒತ್ತಡದ ಜೀವನಶೈಲಿ ಹಾಗೂ ಕಳಪೆ ಆಹಾರ ಕ್ರಮ ಕೂದಲ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆದ್ದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಲು ಈ ಆಹಾರಗಳನ್ನು ಸೇವಿಸಿ.

ಪೇರಳೆ ಹಣ್ಣಿನಲ್ಲಿ ವಿಟಮಿನ್​​ ಸಿ ಸಮೃದ್ಧವಾಗಿದ್ದು, ಕೂದಲು ಉದುರುವಿಕೆ ಸಮಸ್ಯೆಗೆ ಮುಕ್ತಿ ನೀಡುತ್ತದೆ.

ಮೊಟ್ಟೆಯು ಚರ್ಮದ ಆರೋಗ್ಯವನ್ನು ಅಂದರೆ ನೆತ್ತಿಯಿಂದಲೇ ಪೋಷಣೆ ನೀಡುತ್ತದೆ.

ದಾಲ್ಚಿನಿ ರಕ್ತ ಪರಿಚಲನೆಯನ್ನು ಸರಾಗಗೊಳಿಸಿ, ಕೂದಲಿನ ಕಿರುಚೀಲಕ್ಕೆ ಪೋಷಣೆ ನೀಡುತ್ತದೆ.

ಸಾಲ್ಮನ್​​​ ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದ್ದು, ಕೂದಲ ಬೆಳವಣೆಗೆಗೆ ಸಹಾಯಕವಾಗಿದೆ.

ಸೊಪ್ಪು ತರಕಾರಿಗಳಲ್ಲಿ ವಿಟಮಿನ್​​​ ಎ, ವಿಟಮಿನ್​​ ಸಿ ಮತ್ತು ಕಬ್ಬಿಣಾಂಶ ಸಮೃದ್ಧವಾಗಿದ್ದು ನೆತ್ತಿಯಿಂದಲೇ ಪೋಷಣೆ ನೀಡುತ್ತದೆ.