ಕೂದಲು ಉದುರುತ್ತಿದೆಯಾ? ಹಾಗಿದ್ದರೆ ನಿಮ್ಮ ಆಹಾರ ಕ್ರಮ ಬದಲಾಯಿಸಿ

ಒತ್ತಡದ ಜೀವನ ಹಾಗೂ ಕಳಪೆ ಆಹಾರ ಕ್ರಮಗಳು ಕೂದಲು ಉದುರುವಿಕೆಗೆ ಪ್ರಮುಖ ಕಾರಣ.

ಆರೋಗ್ಯಕರ ಆಹಾರಕ್ರಮಗಳನ್ನು ರೂಢಿಸಿಕೊಳ್ಳುವುದರಿಂದ ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ದಿನದಲ್ಲಿ 2 ಮೊಟ್ಟೆ ತಿನ್ನುವುದು, ನಿಮ್ಮ ಕೂದಲಿಗೆ ಪೋಷಣೆ ನೀಡುವಲ್ಲಿ ಸಹಾಯಕವಾಗಿದೆ.

ಕ್ಯಾರೆಟ್​​​: ಇದರಲ್ಲಿ ವಿಟಮಿನ್​​ ಎ ಸಮೃದ್ಧವಾಗಿದ್ದು, ಕೂದಲಿಗೆ ನೆತ್ತಿಯಿಂದಲೇ ಪೋಷಣೆ ನೀಡುತ್ತದೆ. 

ಓಟ್ಸ್​​: ಫೈಬರ್​​​ನ ಉತ್ತಮ ಮೂಲವಾಗಿದ್ದು, ಕೂದಲಿಗೆ ಪೋಷಕಾಂಶವನ್ನು ನೀಡುತ್ತದೆ. 

ಪಾಲಕ್​​ ಸೊಪ್ಪು: ಇದರಲ್ಲಿ ಪೋಲೇಟ್​​​, ಕಬ್ಬಿನಾಂಶ, ವಿಟಮಿನ್​​​ ಎ ಹಾಗೂ ಸಿ ಹೇರಳವಾಗಿದ್ದು, ಕೂದಲಿಗೆ ಉತ್ತಮ.

ಸಿಹಿ ಗೆಣಸು: ಇದು ಬೀಟಾ ಕ್ಯಾರೋಟಿನ್​​ನ ಉತ್ತಮ ಮೂಲವಾಗಿದ್ದು, ಕೂದಲಿನ ಆರೋಗ್ಯ ಹೆಚ್ಚಿಸುತ್ತದೆ. 

ಬೆರ್ರಿ ಹಣ್ಣು: ಇದರಲ್ಲಿ ಕೂದಲ ಬೆಳವಣೆಗೆಗೆ ಹಲವಾರು ಪೋಷಕಾಂಶಗಳು ಸಮೃದ್ಧವಾಗಿದೆ.