ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕೆ. ಎಲ್ ರಾಹುಲ್ ಜೊತೆ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಇತ್ತೀಚೆಗಷ್ಟೇ ಸಪ್ತಪದಿ ತುಳಿದಿದ್ದಾರೆ.

ನಟಿ ಆಥಿಯಾ ತನ್ನ ಬ್ಯೂಟಿ ಸೀಕ್ರೆಟ್ ಗೆ, ನಾನು ಪ್ರತಿ ದಿನ ಕುಡಿಯುವ ಆರೋಗ್ಯಕರ ರೆಡ್ ಜ್ಯೂಸ್ ಕಾರಣ ಎಂದು ಹೇಳಿಕೊಂಡಿದ್ದಾರೆ.

1/2 ಬೀಟ್ರೂಟ್ , 1/2 ಟೊಮ್ಯಾಟೊ, 1 ಕಪ್ ಪಾಲಕ್ ಸೊಪ್ಪು, ಚಿಟಿಕೆ ಉಪ್ಪು, 4 ಐಸ್ ಕ್ಯೂಬ್ , 1/2 ಕಪ್ ನೀರು ಹಾಕಿ ಈ ಜ್ಯೂಸ್ ತಯಾರಿಸಬಹುದು.

1/2 ಬೀಟ್ರೂಟ್ ತೆಗೆದುಕೊಂಡು ಅದನ್ನು ವೃತ್ತಾಕಾರದಲ್ಲಿ ಚಿಕ್ಕ ಚಿಕ್ಕದಾಗಿ ಕತ್ತರಿಸಿ.

ಈಗ ಅದಕ್ಕೆ 1 ಕಪ್ ಪಾಲಕ್ ಸೊಪ್ಪು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಹಾಕಿ.

ಈಗ ಬೀಟ್ರೂಟ್, ಟೊಮ್ಯಾಟೊ, ಪಾಲಕ್ ಸೊಪ್ಪು, ಚಿಟಿಕೆ ಉಪ್ಪು, ಐಸ್ ಕ್ಯೂಬ್ ಮತ್ತು ನೀರು ಸೇರಿಸಿ ಮಿಕ್ಸಿ ಜಾರ್ ನಲ್ಲಿ ರುಬ್ಬಿಕೊಳ್ಳಿ.

ಇದನ್ನು ಈಗ ಚೆನ್ನಾಗಿ ಸೋಸಿ, ಲಿಂಬೆ ರಸ ಸೇರಿಸಿ. ರುಚಿಕರ ಹಾಗೂ ಆರೋಗ್ಯಕರ ಆಥಿಯಾ ಶೆಟ್ಟಿ ಸ್ಪೆಷಲ್ ರೆಡ್ ಜ್ಯೂಸ್ ಸವಿಯಲು ಸಿದ್ಧ.