ವರ್ಷದ ಪ್ರಾರಂಭದಲ್ಲಿದ್ದೀರಿ, ವರ್ಷ ಪೂರ್ತಿ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಈ ಸಲಹೆ ಪಾಲಿಸಿ.

ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿ. ಒಟ್ಟಾರೆ ಆರೋಗ್ಯವನ್ನು ನಿರ್ಧರಿಸುವಲ್ಲಿ ಆಹಾರ ಪದ್ಧತಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಬೆಳಗಿನ ಉಪಾಹಾರವನ್ನು ಪ್ರಮುಖ ಊಟವೆಂದು ಪರಿಗಣಿಸುವುದರಿಂದ ಉಪಾಹಾರ ಸ್ಕಿಪ್ ಮಾಡದಿರಿ. 

ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ನೀವು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರೆ, ಕೆಲ ಹೊತ್ತಿನ ಕಾಲ ಯೋಗ ಮತ್ತು ಧ್ಯಾನಕ್ಕೆ ಸಮಯ ಮೀಸಲಿಡಿ. 

ಸರಿಯಾದ ನಿದ್ದೆ ಅಗತ್ಯ. ಯಾವುದೇ ಒತ್ತಡದ ಕೆಲಸವಿದ್ದರೂ ಕೂಡ ಸರಿಯಾದ ನಿದ್ದೆಯ ಸಮಯವನ್ನು ನಿಗದಿಪಡಿಸಿ.

ನಿಮಗಾಗಿ ಸಮಯ ಮೀಸಲಿಡಿ. ಪ್ರತಿದಿನ ನಿಮಗಾಗಿ ಕನಿಷ್ಠ ಒಂದು ಗಂಟೆಯಾದರೂ ತೆಗೆದುಕೊಳ್ಳುವುದನ್ನು ಮರೆಯದಿರಿ.

ಕೆಲಸದಿಂದ ವಿರಾಮ ತೆಗೆದುಕೊಳ್ಳಿ ಮತ್ತು ಪ್ರತಿ ವಾರಾಂತ್ಯದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ.