ವಾಯು ಮಾಲಿನ್ಯದಿಂದ ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಲು ಸಲಹೆ ಇಲ್ಲಿದೆ

ಭಾರತದಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಈ ಮಾಲಿನ್ಯದಿಂದ ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ.

ಉರಿಯೂತ ಶಮನ ಮಾಡಲು ಸಹಾಯಕವಾಗುವ ಸರಿಯಾದ ಆಹಾರ ಕ್ರಮಗಳನ್ನು ರೂಢಿಸಿಕೊಂಡು ಶ್ವಾಸಕೋಶದ ಆರೋಗ್ಯ ಕಾಪಾಡಿ.

ಪ್ರಾಣಯಾಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ವಾಯು ಮಾಲಿನ್ಯದಿಂದ ನಿಮ್ಮನ್ನು ರಕ್ಷಿಸುತ್ತದೆ.

ಪ್ರತೀ ದಿನ ಕೆಲವೊಂದಿಷ್ಟು ಹೊತ್ತು ನಡಿಗೆ ಅಥವಾ ಓಟದ ಮೂಲಕ ಶ್ವಾಸ ಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನಿಮ್ಮ ಮನೆಯೊಳಗೆ ಶುದ್ಧ ಗಾಳಿಯನ್ನು ಪಡೆಯಲು ಆದಷ್ಟು ಇನ್ ಡೋರ್ ಗಿಡಗಳನ್ನು ಬೆಳೆಸಿ.

ನಿಮ್ಮ ದೇಹ ತೇವಾಂಶ ಕಳೆದುಕೊಳ್ಳದಂತೆ ಕಾಪಾಡಿಕೊಳ್ಳಲು ದಿನಕ್ಕೆ ಕನಿಷ್ಟ 2 ಲೀಟರ್ ನೀರು ಕುಡಿಯಿರಿ.