ವಾರಾಂತ್ಯದಲ್ಲಿ ದಿನ ಪೂರ್ತಿ ಮಲಗಿಕೊಂಡೆ ಕಾಲ ವ್ಯರ್ಥ ಮಾಡಿದೆ ಎಂದು ಯೋಚಿಸುತ್ತೀರಾ?

ಆದ್ದರಿಂದ ರಜಾದಿನದಲ್ಲಿಯೂ ನೀವು ಚುರುಕುತನದಿಂದಿರಲು ಈ ಆಹಾರ ಕ್ರಮವನ್ನು ರೂಡಿಸಿಕೊಳ್ಳಿ.

ನಿಮ್ಮ ಆಹಾರ ಕ್ರಮದಲ್ಲಿ ಹಣ್ಣು ಹಂಪಲುಗಳನ್ನು ಸೇರಿಸಿ. ಇದು ನಿಮ್ಮ ಶಕ್ತಿ ನೀಡಿ, ದಿನ ಪೂರ್ತಿ ಚುರುಕಿನಿಂದ ಇರುವಂತೆ ಮಾಡುತ್ತದೆ. 

ಎಳನೀರಿನಲ್ಲಿ ದೇಹಕದಕ್ಕೆ ಬೇಕಾಗುವ ಪೌಷ್ಟಿಕಾಂಶಗಳು ಸಮೃದ್ಧವಾಗಿದ್ದು, ಇದು ನಿಮ್ಮಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾದಾಗ, ದಿನ ಪೂರ್ತಿ ನೀವು ಹ್ಯಾಂಗ್ ಓವರ್ನಲ್ಲಿ ಇರುತ್ತೀರಿ. ಈ ಸಮಸ್ಯೆಗೆ ಶುಂಠಿ ಚಹಾ ಉತ್ತಮ ಔಷಧಿಯಾಗಿದೆ.

ದಿನದಲ್ಲಿ 2 ಲೀಟರ್ ನೀರು ಕುಡಿಯಿರಿ. ಇದು ನಿಮ್ಮನ್ನು ದಿನ ಪೂರ್ತಿ ಚುರುಕುತನದಿಂದಿರಲು ಸಹಕರಿಸುತ್ತದೆ.

ಬೆಳಗಿನ ಉಪಹಾರದೊಂದಿಗೆ ಒಂದು ಕಪ್​​ ಕಾಫಿ ಕುಡಿಯಿರಿ. ಇದು ನಿಮ್ಮನ್ನು ಜಡತ್ವದಿಂದ ಹೊರತರಲು ಸಹಾಯಕವಾಗಿದೆ.