ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗುವ ನಾರಿನಾಂಶವಿರುವ ಆಹಾರ ಸೇವಿಸಿ ಜೊತೆಗೆ ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ.

ಮಧುಮೇಹವು ನಿಮ್ಮ ಹೃದಯಕ್ಕೆ ಹಾನಿಯುಂಟುಮಾಡುತ್ತದೆ. ಆದ್ದರಿಂದ ಸಕ್ಕರೆ ಮಟ್ಟ ಹೆಚ್ಚಾಗದಂತೆ ಅಗತ್ಯ ಜೀವನಶೈಲಿ ರೂಡಿಸಿ.

ಅಧಿಕ ರಕ್ತದೊತ್ತಡ ಹೃದಯಾಘಾತ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಆರೋಗ್ಯಕರ ತೂಕ ಮತ್ತು ಒತ್ತಡವನ್ನು ಕಡಿಮೆ ಮಾಡಿ.

ಅಧಿಕ ಬೊಜ್ಜು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನೀವು ತೂಕ ನಷ್ಟದ ಪರಿಹಾರವನ್ನು ಕಂಡುಹಿಡಿಯಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಧೂಮಪಾನವು ನಿಮ್ಮ ಹೃದಯಕ್ಕೆ ಬರುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತದೆ.

ಒತ್ತಡದಿಂದ ಆದಷ್ಟು ಹೊರಬನ್ನಿ. ಆದ್ದರಿಂದ ಪ್ರತಿದಿನದ ಜೀವನ ಕ್ರಮದಲ್ಲಿ ಯೋಗಾಭ್ಯಾಸ, ಪ್ರಾಣಯಾಮ ರೂಡಿಸಿಕೊಳ್ಳಿ.

45 ವರ್ಷಗಳ ನಂತರ ಪುರುಷರಿಗೆ ಮತ್ತು ಋತುಬಂಧದ ನಂತರ ಅಥವಾ 50ರ ನಂತರದ ಮಹಿಳೆಯರಿಗೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತದೆ.