ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಆಹಾರಗಳಿವು

ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಯುವಕರಲ್ಲೇ ಹೃದಯಾಘಾತದ ಕಂಡುಬರುತ್ತದೆ.

ಹೃದಯಾಘಾತಕ್ಕೆ ಪ್ರಮುಖ ಕಾರಣ ಕಳಪೆ ಆಹಾರ ಹಾಗೂ ಒತ್ತಡದ ಜೀವನಶೈಲಿ.

ಈ ಕಳಪೆ ಆಹಾರಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.

ಸೋಡಾ: ಇದು ಬೊಜ್ಜು, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.

ಸಂಸ್ಕರಿಸಿದ ಧಾನ್ಯಗಳು ತ್ವರಿತವಾಗಿ ಸಕ್ಕರೆಯಾಗಿ ಬದಲಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಪಿಜ್ಜಾ: ಇದರಲ್ಲಿ ಸೋಡಿಯಂ, ಕೊಬ್ಬು ಮತ್ತು ಕ್ಯಾಲೋರಿ ಅಧಿಕವಾಗಿದ್ದು, ಹೃದಯಾಘಾತಕ್ಕೆ ಕಾರಣವಾಗುತ್ತವೆ.

ಬೆಣ್ಣೆ ಸಾಕಷ್ಟು ಸ್ಯಾಚುರೇಟ್​​​ ಕೊಬ್ಬನ್ನು ಹೊಂದಿದ್ದು, ಕೆಟ್ಟ ಕೊಲೆಸ್ಟ್ರಾಲ್​​ ಹೆಚ್ಚಿಸುತ್ತದೆ.

ಐಸ್​​ ಕ್ರೀಂನಲ್ಲಿ ಸ್ಯಾಚುರೇಟ್​​​ ಕೊಬ್ಬು, ಸಕ್ಕರೆ ಹಾಗೂ ಕ್ಯಾಲೋರಿ ಅಧಿಕವಾಗಿರುತ್ತದೆ.