ಮಗುವಿನ ತ್ವಚೆಯ ಆರೈಕೆಗೆ ಬಳಸುವ ಉತ್ಪನ್ನಗಳ ಬಗ್ಗೆ ಎಚ್ಚರದಿಂದಿರಿ
ಮಗುವಿನ ತ್ವಚೆಯು ನಾಜೂಕಾಗಿರುವುದರಿಂದ ಹೆಚ್ಚಿನ ಕಾಳಜಿಯನ್ನು ವಹಿಸುವುದು ಅಗತ್ಯವಾಗಿರುತ್ತದೆ.
ನೀವು ಆಯ್ಕೆ ಮಾಡುವ ಕೆಲವೊಂದು ಉತ್ಪನ್ನಗಳು ಮಗುವಿನ ಚರ್ಮಕ್ಕೆ ಹಾನಿಯುಂಟು ಮಾಡಬಹುದು.
ಆದ್ದರಿಂದ ಚರ್ಮದ ಮೇಲೆ ಯಾವುದೇ ಅಲರ್ಜಿಗಳು ಉಂಟಾಗದಂತಹದ ಉತ್ಪನ್ನವನ್ನು ಬಳಸಿ.
ಹಾನಿಕಾರಕ ರಾಸಾಯನಿಕ ಮುಕ್ತವಾದ ಉತ್ಪನ್ನಗಳನ್ನು ನೋಡಿ ತೆಗೆದುಕೊಳ್ಳಿ.
ಮಕ್ಕಳ ತ್ವಚೆಯ ಆರೈಕೆಗಾಗಿ ನೈಸರ್ಗಿಕ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳಿ.
ಯಾವುದೇ ಕ್ರೀಮ್ಗಳನ್ನು ಮಗುವಿಗೆ ಹಚ್ಚುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ಇದಲ್ಲದೇ ಯಾವುದೇ ಉತ್ಪನ್ನಗಳನ್ನು ಖರೀದಿಸುವಾಗ ಅದರ ಮುಕ್ತಾಯದ ದಿನಗಳನ್ನು ಪರಿಶೀಲಿಸಿ.
ನಿಮ್ಮ ಮಗುವಿನ ತ್ವಚೆಯ ಮೇಲೆ ಯಾವುದೇ ಅಲರ್ಜಿಯಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ