ಜ್ವರವನ್ನು ಮನೆಯಲ್ಲೇ ಗುಣಪಡಿಸಿಕೊಳ್ಳಲು ಇಲ್ಲಿದೆ ಕೆಲವು ಸಲಹೆಗಳು
ಕೆಮ್ಮು ಮತ್ತು ವೈರಲ್ ಸೋಂಕುಗಳು ಜ್ವರಕ್ಕೆ ಕಾರಣವಾಗಬಹುದು. ಮನೆಮದ್ದುಗಳು ಜ್ವರವನ್ನು ತಕ್ಷಣವೇ ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ತೊಯ್ದ ಬಟ್ಟೆಗಳನ್ನು ಬಳಸಿ
ತೋಯ್ದ ಬಟ್ಟೆಯಿಂದ ನಿಮ್ಮ ಹಣೆ, ಪಾದ, ಬುಜ ಮತ್ತು ಕುತ್ತಿಗೆಯನ್ನು ಒರೆಸಿಕೊಳ್ಳಿ. ಇದು ಜ್ವರ ಕಡಿಮೆಯಾಗಲು ಸಹಾಯಕ
ನೀರನ್ನು ಕುಡಿಯುತ್ತಾ ಇರಿ
ಆಗಾಗ ನೀರು ಕುಡಿಯುತ್ತಿರುವುದರಿಂದ ದೇಹದಲ್ಲಿ ತೇಂವಾಂಶ ಕಡಿಮೆಯಾಗುವುದಿಲ್ಲ. ಮತ್ತು ಸೋಂಕನ್ನು ನಿವಾರಿಸಲು ಸಹಾಯಕವಾಗುತ್ತದೆ
ನಿಮ್ಮ ಸುತ್ತಲಿನ ವಾತಾವರಣ ಶಾಂತವಾಗಿ ಮತ್ತು ತಂಪಾಗಿರುವಂತೆ ನೋಡಿಕೊಳ್ಳಿ
ಶಾಂತವಾದ ಮತ್ತು ತಂಪಾದ ವಾತಾವರಣ ನಿಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ನಿಮಗೆ ಬೇಕು ಅನ್ನಿಸಿದರೇ ತೆಳುವಾದ ಬೆಡ್ ಶೀಟ್ ಹೊಚ್ಚಿಕೊಳ್ಳಿ
ಆದಷ್ಟು ತೆಳುವಾದ ಹಗುರವಾದ ಬಟ್ಟೆ ಧರಿಸಿ
ತೆಳುವಾದ ಹಗುರವಾದ ಬಟ್ಟೆಗಳು ದೇಹದ ಉಷ್ಣಾಂಶವನ್ನು ಹೆಚ್ಚದಂತೆ ಸಹಾಯ ಮಾಡುತ್ತದೆ.