ಅದಾನಿ ಸಮೂಹದ ಷೇರು ಮೌಲ್ಯ ಕುಸಿತದ ಬೆನ್ನಲ್ಲೇ ಎಲ್​ಐಸಿ, ಎಸ್​​ಬಿಐ ನಷ್ಟದ ಬಗ್ಗೆ ಚರ್ಚೆಯಾಗುತ್ತಿದೆ.

ಅದಾನಿ ಸಮೂಹ ಸಂಸ್ಥೆಗಳಿಗೆ 21,000 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಎಸ್​ಬಿಐ ತಿಳಿಸಿದೆ.

ಅದಾನಿ ಸಮೂಹಕ್ಕೆ ಕೊಟ್ಟಿರುವ ಸಾಲ ಆರ್​ಬಿಐ ನಿಗದಿಪಡಿಸಿರುವ ಮಿತಿಯಲ್ಲೇ ಇದೆ ಎಂದು ಎಸ್​ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖರಾ ತಿಳಿಸಿದ್ದಾರೆ.

ಹಿಂಡನ್​ಬರ್ಗ್ ರಿಸರ್ಚ್ ವರದಿ ಪರಿಣಾಮ ವಾರದ ಅವಧಿಯಲ್ಲಿ ಅದಾನಿ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ.

ಗೌತಮ್ ಅದಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಒಂದೇ ವಾರದಲ್ಲಿ 4ರಿಂದ 15ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅದಾನಿ ಕುಸಿತ ಕಂಡಿದ್ದು, ಮುಕೇಶ್ ಅಂಬಾನಿ ಅಗ್ರ ಸ್ಥಾನ ಪಡೆದಿದ್ದಾರೆ.

ಅದಾನಿ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತ ಮುಂದುವರಿದಿದೆ.