2023 ರ ಏಷ್ಯಾಕಪ್ ಪಂದ್ಯದಲ್ಲಿ ಮತ್ತೊಮ್ಮೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನೂ ಔಟ್ ಮಾಡುವ ಮೂಲಕ ಶಾಹೀನ್ ಅಫ್ರಿದಿ ಈ ಇಬ್ಬರು ಎದುರು ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ.
03 September 2023
ಈ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ವಿರುದ್ಧ ಒಂದೆರಡು ಬೌಂಡರಿಗಳನ್ನು ಬಾರಿಸಿದ ರೋಹಿತ್ ಶರ್ಮಾ ಆ ಬಳಿಕ ಅವರ ಮುಂದಿನ ಓವರ್‌ನಲ್ಲಿ ಬೌಲ್ಡ್ ಆದರು.
03 September 2023
ವಿರಾಟ್ ಕೊಹ್ಲಿ ಕೂಡ ನಸೀಮ್ ಶಾ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆದರೆ ಶಾಹೀನ್ ಅಫ್ರಿದಿ ಎದುರು ಮತ್ತೆ ಮಂಡಿಯೂರಿದರು.
03 September 2023
ವಿರಾಟ್ ಕೊಹ್ಲಿ ಇದುವರೆಗೆ ಎಡಗೈ ವೇಗಿಗಳ ವಿರುದ್ಧ 122 ಏಕದಿನ ಇನ್ನಿಂಗ್ಸ್ ಆಡಿದ್ದು, ಇದರಲ್ಲಿ 1473 ರನ್ ಕಲೆಹಾಕಿದ್ದಾರೆ
03 September 2023
ಎಡಗೈ ವೇಗಿಗಳ ವಿರುದ್ಧ 122 ಇನ್ನಿಂಗ್ಸ್‌ಗಳಲ್ಲಿ 57.1 ಸರಾಸರಿ ಹೊಂದಿರುವ ಕೊಹ್ಲಿ 32 ಬಾರಿ ಔಟಾಗಿದ್ದಾರೆ.
03 September 2023
ಇನ್ನು 2021 ರಿಂದ ಎಡಗೈ ವೇಗಿಗಳ ವಿರುದ್ಧ 98 ಎಸೆತಗಳಲ್ಲಿ 87 ರನ್ ಬಾರಿಸಿರುವ ಕೊಹ್ಲಿ 4 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
03 September 2023
ಮತ್ತೊಂದೆಡೆ, ರೋಹಿತ್ ಶರ್ಮಾ ಎಡಗೈ ಸೀಮರ್‌ಗಳ ವಿರುದ್ಧ 131 ಇನ್ನಿಂಗ್ಸ್‌ಗಳಲ್ಲಿ 1459 ರನ್ ಕಲೆ ಹಾಕಿದ್ದಾರೆ.
03 September 2023
ರೋಹಿತ್ ಶರ್ಮಾ ಎಡಗೈ ವೇಗಿ ವಿರುದ್ಧ 55.3 ಸರಾಸರಿ ಹೊಂದಿದ್ದು, 31 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
03 September 2023
ಇನ್ನು 2021 ರಿಂದ ಎಡಗೈ ವೇಗಿಗಳ ವಿರುದ್ಧ 147 ಎಸೆತಗಳಲ್ಲಿ 138 ರನ್ ಕಲೆಹಾಕಿರುವ ರೋಹಿತ್ 6 ಬಾರಿ ಔಟಾಗಿದ್ದಾರೆ.