48 ವರ್ಷ ವಯಸ್ಸಿನ ಶಿಲ್ಪಾ ಶೆಟ್ಟಿ ಈಗಲೂ ಸಪೂರ ದೇಹ ಹೊಂದಿರಲು ಕಾರಣ ಅವರ ಜೀವನ ಕ್ರಮ
ಶಿಲ್ಪಾ ಶೆಟ್ಟಿ ಒಂದು ದಿನವೂ ಯೋಗ, ಜಿಮ್ ತಪ್ಪಿಸುವುದಿಲ್ಲ.
ಸರಿಯಾದ ಆಹಾರ ತಿಂದರಷ್ಟೆ ಮಾಡಿದ ವ್ಯಾಯಾಮ ಫಲ ನೀಡುವುದೆನ್ನುತ್ತಾರೆ ಶಿಲ್ಪಾ
ಶಿಲ್ಪಾರ ಮುಂಜಾನೆ ಪ್ರಾರಂಭವಾಗುವುದು ಒಂದು ಲೀಟರ್ ನೀರು ಕುಡಿಯುವ ಮೂಲಕ.
ಬೆಳಿಗಿನ ತಿಂಡಿಗೆ ಒಣಹಣ್ಣುಗಳು ಹಾಗೂ ಹಾಲು ಇರಲೇಬೇಕು.
ಮಧ್ಯಾಹ್ನ ಚಪಾತಿ, ಪರೋಟ ಜೊತೆಗೆ ಬೇಯಿಸಿದ ತರಕಾರಿ ಮತ್ತು ಮೊಟ್ಟೆಯ ಬಿಳಿ ಭಾಗ.
ರಾತ್ರಿ ಮತ್ತೆ ಚಪಾತಿ, ಹಸಿ ತರಕಾರಿ ಮತ್ತು ಹಣ್ಣುಗಳು.
ಚೆನ್ನಾಗಿ ನೀರು ಕುಡಿಯುವ ಶಿಲ್ಪಾ, ಹಣ್ಣಿನ ರಸ ತಪ್ಪಿಸುವುದಿಲ್ಲ.
ಶಿಲ್ಪಾ ಶೆಟ್ಟಿ ಸಕ್ಕರೆ ಸುತಾರಾಂ ಸೇವಿಸುವುದಿಲ್ಲ, ಉಪ್ಪಿನ ಬಳಕೆಯೂ ಕಡಿಮೆ