ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

ಆರೋಗ್ಯಕರ ಆಹಾರ: ಬೇಸಿಗೆಯಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸಿ. ದಿನದಲ್ಲಿ 3 ಬಾರಿ ತಿನ್ನುವಲ್ಲಿ 5 ಬಾರಿ ಆಹಾರ ಸೇವಿಸಿ ಆದರೆ ಸಣ್ಣ ಪ್ರಮಾಣದಲ್ಲಿ ಸೇವಿಸಿ.

ಕಣ್ಣುಗಳ ರಕ್ಷಣೆ: ಬಿಸಿಲಿಗೆ ಕಣ್ಣುಗಳಿಗೆ ಹೆಚ್ಚು ಆಯಾಸವಾಗುತ್ತದೆ. ಬಿಸಿಲಿನಿಂದ ಕಣ್ಣುಗಳನ್ನು ಕಾಪಾಡಿಕೊಳ್ಳಲು ಕೂಲಿಂಗ್ ಗ್ಲಾಸ್ ಬಳಸಿ

ಓಡಾಟ: ಹೊರಗೆ ಓಡಾಡುವುದನ್ನು ಕಡಿಮೆ ಮಾಡಿ. ಅದರಲ್ಲೂ ಮಧ್ಯಾಹ್ನದ ಸಮಯ ಹೊರಗೆ ಹೋಗಬೇಡಿ. ಹೋಗುವುದಾದರೆ ಛತ್ರಿಗಳನ್ನು ಬಳಸಿ

ನೀರು ಸೇವನೆ: ಸಾಕಷ್ಟು ನೀರು ಕುಡಿಯಿರಿ. ಕನಿಷ್ಠವೆಂದರೂ 2-3 ಲೀಟರ್ ನೀರು ನೆವಿಸಿ. ನೀರಿಗೆ ತುಳಸಿ, ಮೆಂತ್ಯೆ ಅಥವಾ ಜೀರಿಗೆ ಸೇರಿಸುವುದು ಆರೋಗ್ಯಕ್ಕೆ ಒಳ್ಳೆಯದು.

ತಿಳಿ ಬಣ್ಣದ ಬಟ್ಟೆಗಳು: ಗಾಢ ಬಣ್ಣದ ಬಟ್ಟೆಗಳು ದೇಹದ ಶಾಖವನ್ನು ಹೆಚ್ಚಿಸುತ್ತದೆ, ಹಾಗಾಗಿ ಬಿಳಿ, ನೀಲಿ, ಕಂದು ಇಂತಹ ತಿಳಿ ಬಣ್ಣದ ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಧರಿಸಿ.

ಹಣ್ಣು ಸೇವನೆ: ಬೇಸಿಗೆ ಎಂದರೆ ರುಚಿಕರವಾದ ಹಣ್ಣುಗಳು ಸಿಗುವ ಸಮಯ. ಕಲ್ಲಂಗಡಿ, ದ್ರಾಕ್ಷಿ, ಕರ್ಬೂಜಾದಂತಹ ಹಣ್ಣುಗಳನ್ನು ನಿತ್ಯ ಸೇವಿಸಿ