ಇಪಿಎಫ್ ಎಂಬುದು ಉದ್ಯೋಗಿಗಳಿಗಾಗಿ ಕೇಂದ್ರ ಸರ್ಕಾರ ಆರಂಭಿಸಿರುವ ಸಾಮಾಜಿಕ ಭದ್ರತಾ ಯೋಜನೆಯಾಗಿದೆ.

ಮೊಬೈಲ್​ ಎಸ್​ಎಂಎಸ್, ಆನ್​ಲೈನ್​ ಮೂಲಕವೂ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದಾಗಿದೆ.

ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899 ಸಂಖ್ಯೆಗೆ ‘‘EPFOHO UAN LAN’’ ಎಸ್​ಎಂಎಸ್ ಕಳುಹಿಸಿ ಬ್ಯಾಲೆನ್ಸ್ ತಿಳಿಯಬಹುದು.

011-22901406 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬ್ಯಾಲೆನ್ಸ್ ವಿವರ ಪಡೆಯಬಹುದು.

ಯುಎಎನ್​ ಸಂಖ್ಯೆಯನ್ನು ಬಳಸಿಕೊಂಡು ಆನ್​ಲೈನ್​ ಮೂಲಕವೂ ಬ್ಯಾಲೆನ್ಸ್ ಪರಿಶೀಲಿಸಬಹುದು.

ಇಪಿಎಫ್ ನ ಮೆಂಬರ್ ಇ-ಸೇವಾ ಪೋರ್ಟಲ್ ಗೆ ಭೇಟಿ ನೀಡಿ ‘Know Your UAN’ ಲಿಂಕ್ ಕ್ಲಿಕ್ ಯುಎಎನ್ ಆ್ಯಕ್ಟಿವೇಟ್ ಮಾಡಿ.

ನಂತರ ಮೆಂಬರ್ ಇ-ಸೇವಾ​ ಪೋರ್ಟಲ್ ಅಥವಾ ಇಪಿಎಫ್​ ಪಾಸ್​ಬುಕ್ ಸೈಟ್​ಗೆ ಭೇಟಿ ನೀಡಿ.

ಯುಎಎನ್​​ ಮತ್ತು ಪಾಸ್​ವರ್ಡ್ ನಮೂದಿಸಿ. ಲಾಗಿನ್ ಆದ ಬಳಿಕ ಬ್ಯಾಲೆನ್ಸ್ ವಿವರ ಡೌನ್​ಲೋಡ್ ಮಾಡಬಹುದು.