ಅಣಬೆ ಸ್ವಚ್ಛಗೊಳಿಸುವ ಸುಲಭ ವಿಧಾನ ಇಲ್ಲಿದೆ
ಅಣಬೆ ಕಡಿಮೆ ಕ್ಯಾಲೋರಿ, ವಿಟಮಿನ್ ಡಿ ಹಾಗೂ ಉತ್ಕರ್ಷಣ ನಿರೋಧಕ ಸಮೃದ್ಧವಾಗಿರುವ ಆಹಾರವಾಗಿದೆ.
ಸಾಮಾನ್ಯವಾಗಿ ಅಣಬೆಗಳನ್ನು ಸಾಕಷ್ಟು ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. ಆದರೆ ದೊಡ್ಡ ಸಮಸ್ಯೆಯೆಂದರೆ ಅಣಬೆ ಸ್ವಚ್ಛಗೊಳಿಸುವುದು.
ಅಣಬೆಗಳನ್ನು ಸ್ವಚ್ಛಗೊಳಿಸುವ ಸುಲಭ ಮಾರ್ಗವೆಂದರೆ ಮೊದಲಿಗೆ ಅವುಗಳನ್ನು ಚಿಕ್ಕದಾಗಿ ತುಂಡಾರಿಸಿದರೆ ಸುಲಭವಾಗಿ ಸ್ವಚ್ಛಗೊಳಿಸಬಹುದು.
ಮತ್ತೊಂದು ಮಾರ್ಗವೆಂದರೆ ಅವುಗಳ ಕೊಳೆಯನ್ನು ಟಿಶ್ಯೂ ಪೇಪರ್ ಅಥವಾ ಬಟ್ಟೆಯಿಂದ ಚೆನ್ನಾಗಿ ಉಜ್ಜಿಕೊಳ್ಳಿ.
ಕೆಲವೊಂದು ಅಣಬೆಗಳ ಮೇಲಿನ ಕಲೆಗಳು ಹೋಗುವುದಿಲ್ಲ, ಆಗ ಕಲೆಗಳಿರುವ ಭಾಗವನ್ನು ಕತ್ತರಿಸಿ ತೆಗೆಯಿರಿ.
ಒಂದು ಬಟ್ಟಲಿನಲ್ಲಿ ಅಣಬೆಯನ್ನು ಹಾಕಿ ಅದರ ಮೇಲೆ ಹಿಟ್ಟು ಸುರಿಯಿರಿ. ಈಗ ಕೊಳೆಗಳನ್ನು ಉಜ್ಜಿ, ನಂತರ ಇನ್ನೊಂದು ಪಾತ್ರೆಗೆ ಹಾಕಿ ತೊಳೆಯಿರಿ.
ಮುಂದಿನ ಬಾರೀ ನೀವು ಅಣಬೆಗಳನ್ನು ಸ್ವಚ್ಛಗೊಳಿಸುವಾಗ ಈ ಟಿಪ್ಸ್ ಫಾಲೋ ಮಾಡಿ.