ನಿಮ್ಮ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಹೇಗೆ?

ದಿನನಿತ್ಯ ಕನಿಷ್ಠ 15-20 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮೂತ್ರಪಿಂಡಗಳಂತಹ ದೇಹದ ಪ್ರಮುಖ ಅಂಗಗಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸಾಧ್ಯ.

ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಿ. ಇದು ನಿಮ್ಮ ಕಿಡ್ನಿಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ನಿಮ್ಮ ದೇಹದ ತೂಕದ ಬಗ್ಗೆ ಗಮನವಿಡಿ. ನಿಮ್ಮ ದೇಹದ ತೂಕ ಲೆಕ್ಕಕ್ಕಿಂತ ಹೆಚ್ಚು ಅಥವಾ ಕಡಿಮೆ ಆಗದಂತೆ ನೋಡಿಕೊಳ್ಳಿ

ನೀವು ದಿನನಿತ್ಯ ತಿನ್ನುವ ಆಹಾರದಲ್ಲಿ ಎಲ್ಲ ರೀತಿಯ ವಿಟಮಿನ್, ಪ್ರೊಟೀನ್, ಕಾರ್ಬೋಹೈಡ್ರೇಟ್ ಇವೆಯಾ ಎಂದು ಗಮನಿಸಿ. ಸಮತೋಲನದ ಆಹಾರವನ್ನು ಸೇವಿಸಿ.

ನಿಮ್ಮ ದೇಹದ ರಕ್ತದ ಒತ್ತಡವನ್ನು ಹತೋಟಿಯಲ್ಲಿಟ್ಟುಕೊಳ್ಳಿ. ತೀವ್ರ ರಕ್ತದೊತ್ತಡ ನಿಮ್ಮ ಮೂತ್ರಪಿಂಡಗಳಿಗೆ ಹಾನಿ ಉಂಟು ಮಾಡುತ್ತದೆ.

ಸಾಕಷ್ಟು ನೀರು ಸೇವಿಸಿ. ದಿನಕ್ಕೆ ಕನಿಷ್ಠ 3-4 ಲೀ. ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀರು ನಿಮ್ಮ ಕಿಡ್ನಿಗಳಿಂದ ಸೋಡಿಯಂ ಮತ್ತು ಇತರ ಟಾಕ್ಸಿನ್​ಗಳನ್ನು ತೆರವುಗೊಳಿಸುತ್ತದೆ.

ಧೂಮಪಾನ/ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ. ಆದಷ್ಟು ಧೂಮಪಾನದಿಂದ ದೂರವಿರಿ, ಇಲ್ಲವಾದಲ್ಲಿ ಕಡಿಮೆ ಸೇವನೆ ಮಾಡುವುದರ ಬಗ್ಗೆ ಗಮನ ಹರಿಸಿ