ಸೌತೆಕಾಯಿಯನ್ನು ಸಿಪ್ಪೆ ತೆಗೆಯದೆ ತುಂಡುಗಳಾಗಿ ಕತ್ತರಿಸಿ.

ಈಗ ಒಂದು ಪಾತ್ರೆಯಲ್ಲಿ ನೀರು  ತೆಗೆದುಕೊಂಡು ಅದರಲ್ಲಿ ಸೌತೆಕಾಯಿ ತುಂಡುಗಳನ್ನು ಹಾಕಿ.

ಈಗ ಅದನ್ನು ಕಡಿಮೆ ಶಾಖದಲ್ಲಿ 5-6 ನಿಮಿಷಗಳ ಕಾಲ ಕುದಿಸಿ. ನಂತರ ಅದನ್ನು ಬ್ಲೆಂಡರ್ನಲ್ಲಿ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಸೋಸಿಕೊಳ್ಳಿ ಮತ್ತು ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ. ಅದರಲ್ಲಿ ರೋಸ್ ವಾಟರ್​ನ್ನು ಮಿಶ್ರಣ ಮಾಡಬಹುದು.

ನೀವು ಈ ಟೋನರನ್ನು 3-4 ದಿನಗಳವರೆಗೆ  ಬಳಸಬಹುದು.