ಧೂಮಪಾನ ತ್ಯಜಿಸಿದ ನಂತರ ಚರ್ಮದಲ್ಲಾಗುವ ಬದಲಾವಣೆ ತಿಳಿದುಕೊಳ್ಳಿ
ಪ್ರತಿಯೊಂದು ವಯೋಮಾನದ ಜನರು ಧೂಮಪಾನದ ಚಟಕ್ಕೆ ಬಲಿಯಾಗಿ ಕಾಯಿಲೆಗೆ ತುತ್ತಾಗಿ ಪ್ರಾಣಕ್ಕೂ ಹಾನಿಯುಂಟು ಮಾಡುತ್ತಾರೆ.
ಧೂಮಪಾನದಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಎಷ್ಟೇ ತಿಳಿದಿದ್ದರೂ, ಈ ಚಟದಿಂದ ದೂರವಾಗಲು ಮಾತ್ರ ಸಾಧ್ಯವಾಗುವುದಿಲ್ಲ.
ಧೂಮಪಾನ ತ್ಯಜಿಸುತ್ತಾ ಬಂದ ಹಾಗೆ ವ್ಯಕ್ತಿಯ ಆರೋಗ್ಯದ ಹೊರತಾಗಿ ಚರ್ಮದ ಮೇಲೆ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು.
ಧೂಮಪಾನ ತ್ಯಜಿಸಿದ ಆರು ತಿಂಗಳ ನಂತರ, ನಿಮ್ಮ ಚರ್ಮವು ಅದರ ಮೂಲ ಚೈತನ್ಯವನ್ನು ಮರಳಿ ಪಡೆಯುತ್ತದೆ.
ಧೂಮಪಾನವು ಕಳಪೆ ರಕ್ತದ ಹರಿವಿಗೆ ಕಾರಣವಾಗಿ ನಿಮ್ಮ ಚರ್ಮ ಬೂದು ಬಣ್ಣಕ್ಕೆ ತಿರುಗಲು ಕಾರಣವಾಗುತ್ತದೆ.
ಧೂಮಪಾನ ತ್ಯಜಿಸಿದ ಕೆಲವೇ ತಿಂಗಳುಗಳಲ್ಲಿ ಚರ್ಮವು ಆರೋಗ್ಯಕರ ರಕ್ತದ ಹರಿವಿನಿಂದ ನೈಸರ್ಗಿಕ ಬಣ್ಣಕ್ಕೆ ತಿರುಗುತ್ತದೆ.