11-09-2023

ಹಿಟ್'ಮ್ಯಾನ್ ಆರ್ಭಟಕ್ಕೆ ಸಚಿನ್ ದಾಖಲೆ ಉಡೀಸ್

ರೋಹಿತ್ ದಾಖಲೆ

ಏಷ್ಯಾಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಅರ್ಧಶತಕದ ದಾಖಲೆ

ರೋಹಿತ್ 49 ಎಸೆತಗಳಲ್ಲಿ 56 ರನ್ ಚಚ್ಚಿದರು. ಈ ಮೂಲಕ ಏಷ್ಯಾಕಪ್​ನಲ್ಲಿ ತಂಡವೊಂದರ ವಿರುದ್ಧ ಅತ್ಯಧಿಕ 50+ ರನ್ ಬಾರಿಸಿದ ದಾಖಲೆ ತಮ್ಮದಾಗಿಸಿದ್ದಾರೆ.

ಸಚಿನ್ ದಾಖಲೆ ಉಡೀಸ್

ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ಏಷ್ಯಾಕಪ್​ನಲ್ಲಿ ಶ್ರೀಲಂಕಾ ವಿರುದ್ಧ ಒಟ್ಟು 5 ಬಾರಿ 50+ ರನ್​ ಕಲೆಹಾಕಿದ್ದರು.

6ನೇ ಬಾರಿ 50+ ರನ್

ಇದೀಗ ರೋಹಿತ್ ಪಾಕ್ ವಿರುದ್ಧ 6ನೇ ಬಾರಿ 50+ ರನ್ ಬಾರಿಸುವ ಮೂಲಕ ಏಷ್ಯಾಕಪ್​ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಭಾರತೀಯ ಬ್ಯಾಟರ್

ಏಷ್ಯಾಕಪ್​ನಲ್ಲಿ ಅತೀ ಹೆಚ್ಚು ಬಾರಿ 50+ ರನ್​ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೂಡ ರೋಹಿತ್ ಶರ್ಮಾ ಸರಿಗಟ್ಟಿದ್ದಾರೆ.

ರಾಹುಲ್ ದಾಖಲೆ

ರೋಹಿತ್ ಜೊತೆಗೆ ಕೆಎಲ್ ರಾಹುಲ್ ಏಕದಿನ ಮಾದರಿಯ ಕ್ರಿಕೆಟಿನಲ್ಲಿ 2,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಪಂದ್ಯ ಮುಂದೂಡಿಕೆ

ಭಾರತ-ಪಾಕಿಸ್ತಾನ ನಡುವಣ ಸೂಪರ್ ಫೋರ್ ಹಂತದ 3ನೇ ಪಂದ್ಯವನ್ನು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಯಿತು.

ಮತ್ತೆ ಇಂಜುರಿಗೆ ತುತ್ತಾದ ಶ್ರೇಯಸ್; ತಂಡದಿಂದ ಔಟ್..!