ನೆದರ್ಲೆಂಡ್ಸ್ ವಿರುದ್ಧ ಟೀಂ ಇಂಡಿಯಾ 56 ರನ್ ಗಳ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ 39 ಎಸೆತಗಳಲ್ಲಿ 53 ರನ್ ಗಳಿಸಿದರು.

ಕಿಂಗ್ ಕೊಹ್ಲಿ ಈ ಪಂದ್ಯದಲ್ಲೂ ಕೇವಲ 44 ಎಸೆತಗಳಲ್ಲಿ 62 ರನ್ ಚಚ್ಚಿದರು.

ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಸೂರ್ಯ ಕೇವಲ 25 ಎಸೆತಗಳಲ್ಲಿ 51 ರನ್ ಬಾರಿಸಿದರು.

ಅಕ್ಷರ್ ಪಟೇಲ್ ತಮ್ಮ 4 ಓವರ್ ಕೋಟಾದಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರು.

ಅಶ್ವಿನ್ ಕೂಡ 4 ಓವರ್ ಬೌಲ್ ಮಾಡಿ 21 ರನ್​ಗಳಿಗೆ 2 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಮಿಂಚಿದ ಭುವಿ, 2 ಮೇಡನ್ ಓವರ್ ಎಸೆದು 2 ವಿಕೆಟ್ ಪಡೆದರು.