ಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ರನ್‌ಗಳಿಂದ ರೋಚಕ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ದೀಪಕ್ ಹೂಡಾ 23 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ ಅಜೇಯ 41 ರನ್ ಗಳಿಸಿದರು

ಅಲ್ಲದೆ ಅಕ್ಷರ್ ಪಟೇಲ್ ಅವರೊಂದಿಗೆ ಅಜೇಯ ಆರನೇ ವಿಕೆಟ್‌ಗೆ ಕೇವಲ 30 ಎಸೆತಗಳಲ್ಲಿ 61 ರನ್ ಕೂಡ ಸೇರಿಸಿದರು.

ಟೀಮ್ ಇಂಡಿಯಾ ಪರ ಶಿವಂ ಮಾವಿ  4 ಓವರ್​ಗಳಲ್ಲಿ 22 ರನ್​ ನೀಡಿ 4 ವಿಕೆಟ್ ಕಬಳಿಸಿದರು.

155 ಕಿ. ಮೀ ವೇಗದಲ್ಲಿ ಬೌಲಿಂಗ್ ಮಾಡಿದ ಮಲಿಕ್, ಟೀಂ ಇಂಡಿಯಾ ಪರ ವೇಗಿಯೊಬ್ಬ ಎಸೆದ  ವೇಗದ ಎಸೆತ ಎಂಬ ದಾಖಲೆ ಬರೆದಿದ್ದಾರೆ.

ತಮ್ಮ ಇನ್ನಿಂಗ್ಸ್​ನಲ್ಲಿ 29 ಎಸೆತಗಳನ್ನು ಎದುರಿಸಿದ ಕಿಶನ್ 3 ಬೌಂಡರಿ ಹಾಗೂ 2 ಸಿಕ್ಸರ್‌ ಕೂಡ ಸಿಡಿಸಿದರು. ಹಾಗೆಯೇ ಅದ್ಭುತ ಕ್ಯಾಚ್ ಕೂಡ ಹಿಡಿದರು.