06-09-2023
Pic credit - google
ಭಾರತದ ಸಂವಿಧಾನದಲ್ಲಿ ಇಂಡಿಯಾ ದಟ್ ಈಸ್ ಭಾರತ್ ಎಂದಿದ್ದ ಹೆಸರನ್ನು ಈಗ ರಿಪಬ್ಲಿಕ್ ಆಫ್ ಭಾರತ್ ಎಂದು ಬದಲಿಸಲು ಸರ್ಕಾರ ಮುಂದಾಗಿದೆ.
Pic credit - Google
ವಿಶ್ವದ ಬೇರೆ ಕೆಲ ದೇಶಗಳು ಬೇರೆ ಬೇರೆ ಕಾರಣಕ್ಕೆ ಹೆಸರನ್ನು ಬದಲಿಸಿಕೊಂಡಿದ್ದಿದೆ. ಈ ಬಗ್ಗೆ ವಿವರ ಮುಂದಿನ ಸ್ಲೈಡ್ ಗಳಲ್ಲಿ ನೋಡಬಹುದು.
Pic credit - Google
ಟರ್ಕಿ ದೇಶದ ಹೆಸರು ಇತ್ತೀಚೆಗೆ ಟರ್ಕಿಯೆ (Turkiye) ಎಂದು ಬದಲಾಗಿದೆ. ದೇಶದ ನಾಗರಿಕತೆ, ಸಂಸ್ಕೃತಿ, ಮೌಲ್ಯಕ್ಕೆ ಪ್ರತೀಕವಾಗಿ ಹೊಸ ಹೆಸರು ಇಡಲಾಗಿದೆ.
Pic credit - Google
ಆಫ್ರಿಕಾ ಖಂಡದಲ್ಲಿರುವ ಸ್ವಾಜಿಲ್ಯಾಂಡ್ ದೇಶ 2018ರಲ್ಲಿ ಇಸ್ವಾಟಿನಿ (Eswatini) ಎಂದು ಹೆಸರು ಬದಲಿಸಿಕೊಂಡಿತು. ಸ್ಥಳೀಯ ಭಾಷೆಯಲ್ಲಿ ಮೊದಲಿಂದಲೂ ಇಸ್ವಾಟಿನಿ ಎಂದೇ ಕರೆಯಲಾಗುತ್ತಿತ್ತು.
Pic credit - Google
ಹಿಂದೆ ಚೆಕೋಸ್ಲಾವಾಕಿಯಾ ಆಗಿದ್ದ ಹೆಸರು ಚೆಕ್ ರಿಪಬ್ಲಿಕ್ ಆಯಿತು. ಈಗ ಚೆಕಿಯಾ (Czechia) ಎಂದು ಬದಲಾಗಿದೆ. ದೇಶದ 6 ಅಧಿಕೃತ ಭಾಷೆಗಳಲ್ಲಿ ಸುಲಭ ಉಚ್ಚಾರಣೆಗಾಗಿ ಹೆಸರನ್ನು ಕಿರುದುಗೊಳಿಸಲಾಗಿದೆ.
Pic credit - Google
ಹಾಲೆಂಡ್ ದೇಶದ ಹೆಸರನ್ನು 2020ರಲ್ಲಿ ನೆದರ್ಲ್ಯಾಂಡ್ಸ್ (Netherlands) ಎಂದು ಅಧಿಕೃತವಾಗಿ ಬದಲಾಯಿಸಲಾಗಿದೆ. ಹಿಂದೆ ಎರಡೂ ಹೆಸರುಗಳು ಚಾಲ್ತಿಯಲ್ಲಿದ್ದವು. ದೇಶದ ಮುಕ್ತತೆಗೆ ಪ್ರತೀಕವಾಗಿ ನೆದರ್ಲ್ಯಾಂಡ್ಸ್ ಹೆಸರಿದೆ.
Pic credit - Google
ಭಾರತದ ನೆರೆಯ ದೇಶವಾದ ಶ್ರೀಲಂಕಾವನ್ನು ಹಿಂದೆ ಸಿಲೋನ್ ಎಂದು ಸಂಬೋಧಿಸಲಾಗುತ್ತಿತ್ತು. ಅದು ಪೋರ್ಚುಗೀಸರು 16ನೇ ಶತಮಾನದಲ್ಲಿ ಇಟ್ಟ ಹೆಸರು. ಕೆಲ ವರ್ಷಗಳ ಹಿಂದೆ ಶ್ರೀಲಂಕಾ ಎಂದು ಹೆಸರು ಬದಲಿಸಲಾಯಿತು.
Pic credit - Google
ಆಫ್ರಿಕಾ ಖಂಡದಲ್ಲಿರುವ ದ್ವೀಪ ರಾಷ್ಟ್ರ ಕೇಪ್ ವೆರ್ಡೆಯನ್ನು 2013ರಲ್ಲಿ ರಿಪಬ್ಲಿಕ್ ಆಫ್ ಕೇಬೋ ವೆರ್ಡೆ (Cabo Verde) ಎಂದು ಬದಲಿಸಲಾಯಿತು. ಕೇಪ್ ಎಂಬ ಇಂಗ್ಲೀಷ್ ಪದದ ಬದಲು ಪೋರ್ಚುಗೀಸ್ ಪದ ಕೇಬೋವನ್ನು ಸೇರಿಸಲಾಯಿತು.
Pic credit - Google
ಥಾಯ್ಲೆಂಡ್ ದೇಶ 20ನೇ ಶತಮಾನದ ಮಧ್ಯಭಾಗದವರೆಗೂ ಸಿಯಾಮ್ (Siam) ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಸಿಯಾಮ್ ಎಂಬುದ ಸಂಸ್ಕೃತದ ಶ್ಯಾಮದ ರೂಪಾಂತರ. 1939ರಲ್ಲಿ ಅದರ ಹೆಸರನ್ನು ಥಾಯ್ಲೆಂಡ್ ಎಂದು ಬದಲಿಸಲಾಯಿತು.
Pic credit - Google
ಭಾರತದ ನೆರೆಯ ದೇಶಗಳಲ್ಲಿ ಒಂದಾದ ಮಯನ್ಮಾರ್ ಹಿಂದೆ ಬರ್ಮಾ ಎಂಬ ಹೆಸರನ್ನು ಹೊಂದಿತ್ತು. ಈ ಬರ್ಮಾ ಎಂಬುದು ಬ್ರಹ್ಮದೇಶದ ಅಪಭ್ರಂಶ. 1989ರಲ್ಲಿ ಬರ್ಮಾ ಹೆಸರನ್ನು ಮಯನ್ಮಾರ್ ಎಂದು ಬದಲಿಸಲಾಯಿತು.
Pic credit - Google
ಇರಾನ್ ದೇಶವನ್ನು ಹಿಂದೆ ಪರ್ಷಿಯಾ ಎಂದು ಕರೆಯಲಾಗುತ್ತಿತ್ತು. 1935ರಲ್ಲಿ ಇದು ಇರಾನ್ ಆಗಿ ಬದಲಾಯಿತು. ಇರಾನೀ ಸಮುದಾಯದ ಪ್ರಾಚೀನತೆಗೆ ಸಂಕೇತವಾಗಿ ಇರಾನ್ ಹೆಸರು ಸೂಕ್ತ ಎಂದು ಭಾವಿಸಲಾಗಿದೆ.
Pic credit - Google