ಪ್ರಥಮ ಟೆಸ್ಟ್'ನಲ್ಲಿ ನಿರಾಯಾಸ ಗೆಲುವು: ಭಾರತಕ್ಕೆ 1-0 ಮುನ್ನಡೆ

ಮೂರೇ ದಿನಕ್ಕೆ ಅಂತ್ಯಕಂಡ ಭಾರತ-ವಿಂಡೀಸ್ ಪ್ರಥಮ ಟೆಸ್ಟ್ ಪಂದ್ಯ

141 ರನ್'ಗಳ ಇನ್ನಿಂಗ್ಸ್ ಜಯದೊಂದಿಗೆ ಭಾರತ 1-0 ಮುನ್ನಡೆ ಪಡೆದುಕೊಂಡಿದೆ

ಮೊದಲ ಇನ್ನಿಂಗ್ಸ್'ನಲ್ಲಿ ವೆಸ್ಟ್ ಇಂಡೀಸ್ ಗಳಿಸಿದ್ದು ಕೇವಲ 150 ರನ್ಸ್

ಭಾರತ ಪರ ಆರ್. ಅಶ್ವಿನ್ 5 ವಿಕೆಟ್, ಜಡೇಜಾ 3 ವಿಕೆಟ್ ಪಡೆದರು

ಭಾರತ ಮೊದಲ ಇನ್ನಿಂಗ್ಸ್'ನಲ್ಲಿ 421 ರನ್'ಗೆ ಡಿಕ್ಲೇರ್ ಘೋಷಿಸಿತು

ಜೈಸ್ವಾಲ್ 171 ರನ್, ರೋಹಿತ್ 103, ಕೊಹ್ಲಿ 76 ರನ್ ಕಲೆಹಾಕಿದರು

ಎರಡನೇ ಇನ್ನಿಂಗ್ಸ್'ನಲ್ಲಿ ವಿಂಡೀಸ್ 130 ರನ್ ಗಳಿಗೆ ಆಲೌಟ್ ಆಯಿತು

ಅಶ್ವಿನ್ ಬರೋಬ್ಬರಿ 7 ವಿಕೆಟ್ ಕಿತ್ತು ಮಿಂಚಿದರೆ, ಜಡೇಜಾ 2 ವಿಕೆಟ್ ಪಡೆದರು