ಇಂದು ಹಾರ್ದಿಕ್ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ

ಇಂದು ಭಾರತ-ವೆಸ್ಟ್ ಇಂಡೀಸ್ ಮೂರನೇ ಟಿ20 ಪಂದ್ಯ

ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲೇ ಈ ಪಂದ್ಯ ನಡೆಯಲಿದೆ

ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ ಈ ಪಂದ್ಯ ಗೆಲ್ಲಲೇ ಬೇಕಿದೆ

ವಿಂಡೀಸ್ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ

ಹಾರ್ದಿಕ್ ಪಡೆ ಮಾನ ಉಳಿಸಿಕೊಳ್ಳಬೇಕಾದರೆ ಉಳಿದಿರುವ 3 ಪಂದ್ಯ ಗೆಲ್ಲಲೇ ಬೇಕಿದೆ

ಕೆರಿಬಿಯನ್ ಪಡೆ ಇತಿಹಾಸ ಸೃಷ್ಟಿಸಲು ಕೇವಲ ಒಂದು ಪಂದ್ಯ ಗೆದ್ದರೆ ಸಾಕು

ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ

ಗಿಲ್ ಅವರನ್ನು ಕೈಬಿಟ್ಟು ಯಶಸ್ವಿ ಜೈಸ್ವಾಲ್'ಗೆ ಅವಕಾಶ ಸಿಗುವ ಸಂಭವವಿದೆ