03-09-2023

ಇನ್ಫಿನಿಕ್ಸ್ ಜಿಟಿ 10 ಪ್ರೊ ಫೋನ್ ಬೆಲೆ ಏರಿಕೆ ಆಗಲು ಕಾರಣವೇನು?

ಆ. 3ಕ್ಕೆ ಬಿಡುಗಡೆ ಆಗಿತ್ತು

ಇನ್ಫಿನಿಕ್ಸ್ ಜಿಟಿ 10 ಪ್ರೊ ಸ್ಮಾರ್ಟ್'ಫೋನ್ ಆಗಸ್ಟ್ 3 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಫೋನ್ ಬೆಲೆಯಲ್ಲಿ ದಿಢೀರ್ ಹೆಚ್ಚಳ ಮಾಡಲಾಗಿದೆ.

ಎಷ್ಟು ರೂ. ಏರಿಕೆ?

ಇನ್ಫಿನಿಕ್ಸ್ ಜಿಟಿ 10 ಪ್ರೊ ಫೋನ್ ಬೆಲೆಯಲ್ಲಿ 1,000 ರೂ. ಹೆಚ್ಚಳ ಮಾಡಲಾಗಿದೆ. ಇದರ 8GB+256GB ಸ್ಟೋರೇಜಿಗೆ 19,999 ರೂ. ಇತ್ತು. ಇದೀಗ 20,999 ರೂ. ಮಾಡಲಾಗಿದೆ.

ಬೆಲೆ ಏರಿಕೆಗೆ ಕಾರಣವೇನು?

ಜಿಟಿ 10 ಪ್ರೊ ದೇಶದಲ್ಲಿ ಭರ್ಜರಿ ಸೇಲ್ ಕಾಣುತ್ತಿದೆ. ಇದರ ಬ್ಯಾಕ್ ಪ್ಯಾನೆಲ್ ಡಿಸೈನ್'ಗೆ ಎಲ್ಲರೂ ಮನಸೋತಿದ್ದಾರೆ. ಹೀಗಾಗಿ ಈ ಫೋನ್ ಬೆಲೆ ಹೆಚ್ಚಳವಾಗಿದೆ ಎನ್ನಲಾಗಿದೆ.

ಬ್ಯಾಕ್ ಪ್ಯಾನೆಲ್ ಹೇಗಿದೆ?

ಈ ಫೋನಿನ ಹಿಂಭಾಗದ ಡಿಸೈನ್ ಹಾಗೂ ಎಲ್ಇಡಿ ಲೈಟ್'ಗಳು ನಥಿಂಗ್ ಫೋನಿಗೆ ಹೋಲುವಂತಿದೆ. ನೋಟಿಫಿಕೇಷನ್ ಬರುವಾಗ ಇದರಲ್ಲಿ ಲೈಟ್ ಆಗುತ್ತದೆ.

ಡಿಸ್‌ಪ್ಲೇ ಹೇಗಿದೆ

ಈ 5G ಫೋನ್ 6.67-ಇಂಚಿನ FHD+ ಅಮೊಲೆಡ್ ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 900 nits ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಪ್ರೊಸೆಸರ್

Mali-G77 MC9 GPU ಜೊತೆಗೆ ಜೋಡಿಯಾಗಿರುವ ಮೀಡಿಯಾಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್‌ನಿಂದ ಚಾಲಿತವಾಗಿದೆ.

ಕ್ಯಾಮೆರಾಗಳು

ಈ ಫೋನಿನಲ್ಲಿ 108MP ಪ್ರಾಥಮಿಕ ಸಂವೇದಕ ಮತ್ತು ಎರಡು 2MP ಸಂವೇದಕಗಳೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಸೆಲ್ಫಿಗಾಗಿ 32MP ಕ್ಯಾಮೆರಾ ಇದೆ.

ಬ್ಯಾಟರಿ, ಚಾರ್ಜಿಂಗ್

ಈ ಫೋನ್ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆಂಡ್ರಾಯ್ಡ್ 13 ಆಧರತ XOS 13 ಮೂಲಕ ರನ್ ಆಗುತ್ತದೆ.