ನಿದ್ರಾಹೀನತೆಗೆ ಕಾರಣವಾಗುವ ಪ್ರಮುಖ ಅಭ್ಯಾಸಗಳು ಇಲ್ಲಿವೆ. ಆದ್ದರಿಂದ ಈ ಕೆಳಗಿನ ಅಭ್ಯಾಸಗಳು ಬಿಟ್ಟು ಬಿಡಿ.
ನೀವು ಎಷ್ಟು ಗಂಟೆ ನಿದ್ರಿಸುತ್ತೀರಿ ಎಂಬುದು ನಿಮ್ಮ ಆರೋಗ್ಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಕಳಪೆ ನಿದ್ದೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು ಆದ್ದರಿಂದ ಮಲಗುವ ಮುನ್ನ ಈ ಅಭ್ಯಾಸ ಬಿಟ್ಟು ಬಿಡಿ.
ಮಲಗುವ ಮುನ್ನ ಫೋನ್ ಬಳಸುವ ಅಭ್ಯಾಸ ನಿಮಗಿದ್ದರೆ ಇಂದಿನಿಂದಲೇ ಬಿಟ್ಟು ಬಿಡಿ. ಈ ಅಭ್ಯಾಸ ನಿದ್ರಾಹೀನತೆಗೆ ಪ್ರಮುಖ ಕಾರಣವಾಗುತ್ತದೆ.
ರಾತ್ರಿ ಕಾಫಿ ಕುಡಿಯುವ ಅಭ್ಯಾಸವಿದ್ದರೆ, ಇದು ನಿಮ್ಮ ನಿದ್ದೆಯ ಮೇಲೆ ನೇರವಾಗಿ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಅಭ್ಯಾಸ ಬಿಟ್ಟು ಬಿಡಿ.
ಮಲಗುವ ಮುನ್ನ ಅತಿಯಾಗಿ ಆಹಾರದ ಸೇವನೆ, ಅಜೀರ್ಣಕ್ಕೆ ಕಾರಣವಾಗಬಹುದು. ಇದು ನಿಮ್ಮ ನಿದ್ದೆಗೆ ಅಡ್ಡಿಯುಂಟು ಮಾಡುತ್ತದೆ.
ಈ ಎಲ್ಲಾ ಅಭ್ಯಾಸಗಳಿಂದ ದೂರವಿದ್ದು, ನಿದ್ದೆಗೆ ಸರಿಯಾದ ಸಮಯವನ್ನು ನಿಗದಿಪಡಿಸಿ. ಉತ್ತಮ ಆರೋಗ್ಯಕ್ಕೆ ನಿದ್ದೆ ತುಂಬಾ ಮುಖ್ಯ.