ಅತೀ ಕಡಿಮೆ ಸಮಯ ನಿದ್ರಿಸುವ ಪ್ರಾಣಿಗಳು ಯಾವುದು ಗೊತ್ತಾ?
ನವಜಾತ ಡಾಲ್ಫಿನ್ ಹಾಗೂ ಅದರ ತಾಯಿ 1ತಿಂಗಳವರೆಗೆ ಮಲಗುವುದಿಲ್ಲ. ಯಾವಾಗಲೂ ಕಣ್ಣುಗಳನ್ನು ತೆರೆದುಕೊಂಡಿರುತ್ತದೆ.
ಗ್ರೇಟ್ ಫ್ರಿಗೇಟ್ ಬರ್ಡ್: ಈ ಹಕ್ಕಿ 12 ಗಂಟೆಗಳಲ್ಲಿ ಕೇವಲ 42ನಿಮಿಷ ಮಾತ್ರ ಮಲಗುತ್ತದೆ.
ನೊಣಗಳು: ಈ ಕೀಟವು ದಿನದಲ್ಲಿ ಕೇವಲ 72 ನಿಮಿಷಗಳ ಕಾಲ ಮಾತ್ರ ನಿದ್ರಿಸುತ್ತದೆ.
ಜೆಲ್ಲಿ ಮೀನು: ದೇಹದಲ್ಲಿ ಕೇಂದ್ರ ನರಮಂಡಲ(ಸೆಂಟ್ರಲ್ ನರ್ವಸ್ ಸಿಸ್ಟಮ್) ಹೊಂದಿಲ್ಲದ ಕಾರಣ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ.
ಕಪ್ಪೆಗಳಲ್ಲಿ ಬುಲ್‌ಫ್ರಾಗ್ ಕೂಡ ಒಂದು ಜಾತಿಯಾಗಿದ್ದು, ಈ ಕಪ್ಪೆ ನಿದ್ರೆ ಮಾಡೋದೆ ಇಲ್ಲ.
ಟಿಲಾಪಿಯಾ: ಈ ಜಾತಿಯ ಮೀನು ಹುಟ್ಟಿದಾಗಿನಿಂದ 22 ದಿನಗಳ ವರೆಗೆ ಮಲಗುವುದಿಲ್ಲ.
ಚಿಟ್ಟೆಗಳು ಮಲಗುವುದಿಲ್ಲ, ಇದು ಕಣ್ಣುಗಳನ್ನು ತೆರೆದುಕೊಂಡೇ ವಿಶ್ರಾಂತಿ ಪಡೆಯುತ್ತದೆ.
ಜಿರಾಫೆ ಇಡೀ ದಿನದಲ್ಲಿ ಕೇವಲ 5 ನಿಮಿಷ ಮಾತ್ರ ನಿದ್ದೆ ಮಾಡುತ್ತದೆ.
ವಾಲ್ರಸ್ 84 ಗಂಟೆಗಳ ಕಾಲ ನಿದ್ದೆ ಇಲ್ಲದೆ ಎಚ್ಚರದಿಂದಿರುತ್ತದೆ.