ಭಾರತದ ಹಸಿರು ಕ್ರಾಂತಿ ಹರಿಕಾರ ಎಂಎಸ್ ಸ್ವಾಮಿನಾಥನ್

(pic credit: google)

28 Sept 2023

ಶ್ರೇಷ್ಠ ಆರ್ಥಿಕ ತಜ್ಞ, ಕೃಷಿ ಕ್ರಾಂತಿ ಹರಿಕಾರ ಎಂಎಸ್ ಸ್ವಾಮಿನಾಥನ್ (98 ವರ್ಷ) 2023 ಸೆ. 28ರಂದು ನಿಧನರಾದರು. ಅವರ ಬಗ್ಗೆ ಮಾಹಿತಿ...

ಸ್ವಾಮಿನಾಥನ್ ಬಗ್ಗೆ

(pic credit: google)

ಎಂಎಸ್ ಸ್ವಾಮಿನಾಥನ್ ತಮಿಳುನಾಡಿನ ಕುಂಬಕೋಣಂನಲ್ಲಿ 1925 ಆಗಸ್ಟ್ 7ರಂದು ಹುಟ್ಟಿದರು. ಬಾಲ್ಯದಿಂದಲೇ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರು.

ಸ್ವಾಮಿನಾಥನ್ ಹುಟ್ಟಿದ್ದು

(pic credit: google)

ಪ್ರಾಣಿ ಶಾಸ್ತ್ರ ಮತ್ತು ಕೃಷಿ ವಿಜ್ಞಾನದಲ್ಲಿ ಎರಡು ಪದವಿ ಪಡೆದಿದ್ದ ಅವರು 1943ರ ಬಂಗಾಳ ಕ್ಷಾಮದ ಬಳಿಕ ಕೃಷಿ ಕ್ಷೇತ್ರದಲ್ಲಿ ಮುಂದುವರಿಯಲು ನಿರ್ಧರಿಸಿದರು.

ಬಂಗಾಳ ಕ್ಷಾಮ

(pic credit: google)

ಎಂಎಸ್ ಸ್ವಾಮಿನಾಥನ್ 1947ರಲ್ಲಿ ದೆಹಲಿಯಲ್ಲಿ ಸಸ್ಯ ತಳಿ ಮತ್ತು ವಂಶಾವಳಿ ಹಾಗು ಸೈಟೋಜೆನಿಟಿಕ್ಸ್ ವಿಷಯಗಳನ್ನು ಅಧ್ಯಯನ ಮಾಡಿದರು.

ಸಸ್ಯ ತಳಿ ಅಧ್ಯಯನ

(pic credit: google)

ಭಾರತದಲ್ಲಿ ಆಹಾರ ಅಭಾವ ನೀಗಿಸಲು 1960ರಲ್ಲಿ ಬೇರೆ ವಿಜ್ಞಾನಿಗಳ ಜೊತೆಗೂಡಿ ಎಂಎಸ್ ಸ್ವಾಮಿನಾಥನ್ ಉತ್ತಮ ತಳಿಯ ಗೋಧಿ ಬೀಜ ಅಭಿವೃದ್ಧಿಪಡಿಸಿದರು.

ಗೋಧಿ ಕ್ರಾಂತಿಗೆ ಮುನ್ನುಡಿ

(pic credit: google)

ಕೃಷಿ ಸಂಶೋಧನೆ ಮತ್ತು ತಂತ್ರಜ್ಞಾನದ ಸಹಾಯದಿಂದ ಬೆಳೆಗಳ ಇಳುವರಿ ಹೆಚ್ಚಿಸಿ ಭಾರತದಲ್ಲಿ ಹಸಿರು ಕ್ರಾಂತಿಗೆ ಬುನಾದಿ ಹಾಕಿದವರು ಎಂಎಸ್ ಸ್ವಾಮಿನಾಥನ್.

ಕೃಷಿ ಕ್ರಾಂತಿ ಹರಿಕಾರ

(pic credit: google)

World Food Prize ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಎಸ್ ಸ್ವಾಮಿನಾಥನ್. 1987ರಲ್ಲಿ ಆ ಪ್ರಶಸ್ತಿಯಿಂದ ಸಿಕ್ಕ ಹಣವನ್ನು ರೀಸರ್ಚ್ ಫೌಂಡೇಶನ್ ಸ್ಥಾಪನೆಗೆ ಬಳಸಿದರು.

ಆಹಾರ ಪ್ರಶಸ್ತಿ

(pic credit: google)

ಎಂಎಸ್ ಸ್ವಾಮಿನಾಥನ್ ಸೈಟೋಜೆನೆಟಿಕ್ಸ್ ಇತ್ಯಾದಿ ಕೃಷಿಕ್ಷೇತ್ರಗಳಲ್ಲಿ 254 ಸಂಶೋಧನಾ ವರದಿ ಪ್ರಕಟಿಸಿದ್ದಾರೆ. 84 ಗೌರವ ಡಾಕ್ಟರೇಟ್​ಗಳನ್ನು ಪಡೆದಿದ್ದಾರೆ.

ವಿಶ್ವದ ಪ್ರಮುಖ ಕೃಷಿತಜ್ಞ

(pic credit: google)

Next Story: ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?