ಯೋಗಾಭ್ಯಾಸದಿಂದ ಮುಟ್ಟಿನ ಸಮಯದಲ್ಲಾಗುವ ಬದಲಾವಣೆ ತಿಳಿದುಕೊಳ್ಳಿ

ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಸಾಕಷ್ಟು ಪ್ರಯೋಜನವನ್ನು ಹೊಂದಿದೆ.

ಮುಟ್ಟಿನ ಸಮಯದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯಕ.

ಮುಟ್ಟಿನ ಸಮಯದಲ್ಲಿ ಹಾರ್ಮೋನ್​​​​ ಬದಲಾವಣೆಯಿಂದಾಗಿ ಸಾಕಷ್ಟು ಕಿರಿಕಿರಿಯುಂಟಾಗುತ್ತದೆ.

ನೀವು ಪ್ರತಿದಿನ ಕೆಲವೊಂದಿಷ್ಟು ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರಿಂದ ಮುಟ್ಟಿನ ಸಮಯದ ಕಿರಿಕಿರಿಯಿಂದ ಮುಕ್ತಿ ಪಡೆಯಬಹುದು.

ಕಿಬ್ಬೊಟ್ಟೆಯ ನೋವು ಹಾಗೂ ಸೆಳೆತಗಳಿಗೂ ನೀವು ಕೆಲ ಯೋಗ ಭಂಗಿಗಳಿಂದ ಚಿಕಿತ್ಸೆ ಪಡೆದುಕೊಳ್ಳಬಹುದು.

ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಪ್ರಾಣಾಯಾಮಗಳನ್ನು ಅಭ್ಯಾಸಿಸಿ.