ಒಮ್ಮೆಯೂ ಐಪಿಎಲ್ ಟ್ರೋಫಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ನಾಯಕನ ಆಯ್ಕೆ ಆಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ನಾಯಕನಾಗಿ ನೇಮಿಸಿದೆ

ವಾರ್ನರ್ ನಾಯಕತ್ವದಲ್ಲಿ, 2016 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.

ಕಾರು ಅಪಘಾತಕ್ಕೊಳಗಾಗಿ ಕ್ರಿಕೆಟ್​ನಿಂದ ದೂರ ಉಳಿದಿರುವ ರಿಷಬ್ ಪಂತ್ ಸುಮಾರು ತಿಂಗಳು ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ

ಹೀಗಾಗಿ ಡೆಲ್ಲಿ ತಂಡದ ಖಾಯಂ ನಾಯಕ ಪಂತ್ ಅಲಭ್ಯತೆಯನ್ನು ಸರಿದೂಗಿಸಲು ಡೆಲ್ಲಿ ತಂಡ ಅನುಭವಿ ವಾರ್ನರ್​ಗೆ ಮಣೆ ಹಾಕಿದೆ.

ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಅಕ್ಷರ್ ಪಟೇಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

ಏಪ್ರಿಲ್ 1 ರಂದು ಲಕ್ನೋ ತಂಡವನ್ನು ಎದುರಿಸುವ ಮೂಲಕ ದೆಹಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.