16ನೇ ಆವೃತ್ತಿಯ ಐಪಿಎಲ್ ನಲ್ಲಿ ಅತಿ ಹೆಚ್ಚು ಕ್ಯಾಚ್ ಗಳನ್ನು ಹಿಡಿದ ಆಟಗಾರರ ವಿವರ ಹೀಗಿದೆ.

16 ಪಂದ್ಯಗಳಿಂದ 17 ಕ್ಯಾಚ್ ಹಿಡಿದಿರುವ ರುತುರಾಜ್ ಗಾಯಕ್ವಾಡ್ ಮೊದಲ ಸ್ಥಾನದಲ್ಲಿದ್ದಾರೆ.

2ನೇ ಸ್ಥಾನದಲ್ಲಿರುವ ಕೊಹ್ಲಿ 14 ಪಂದ್ಯಗಳಿಂದ 13 ಕ್ಯಾಚ್ ಹಿಡಿದಿದ್ದಾರೆ.

13 ಮ್ಯಾಚ್​ಗಳಿಂದ 11 ಕ್ಯಾಚ್ ಹಿಡಿದ ಏಡೆನ್ ಮಾರ್ಕ್ರಾಮ್ 3ನೇ ಸ್ಥಾನದಲ್ಲಿದ್ದಾರೆ.

4ನೇ ಸ್ಥಾನದಲ್ಲಿ 14 ಪಂದ್ಯಗಳಲ್ಲಿ 11 ಕ್ಯಾಚ್ ಹಿಡಿದಿರುವ ಹಿಟ್ ಶಿಮ್ರಾನ್​ ಹಿಟ್ಮಾಯರ್ ಇದ್ದಾರೆ.

14 ಪಂದ್ಯಗಳಲ್ಲಿ 11 ಕ್ಯಾಚ್ ಹಿಡಿದಿರುವ ಡೇವಿಡ್ ಮಿಲ್ಲರ್ ಕೂಡ 4ನೇ ಸ್ಥಾನದಲ್ಲಿದ್ದಾರೆ.

12 ಪಂದ್ಯಗಳಲ್ಲಿ 11 ಕ್ಯಾಚ್ ಹಿಡಿದಿರುವ ದೀಪಕ್ ಹೂಡ ನಂತರದ ಸ್ಥಾನದಲ್ಲಿದ್ದಾರೆ.

16 ಪಂದ್ಯಗಳಲ್ಲಿ 10 ಕ್ಯಾಚ್ ಹಿಡಿದಿರುವ ಟಿಮ್ ಡೇವಿಡ್​ಗೆ 6ನೇ ಸ್ಥಾನ.

17 ಪಂದ್ಯಗಳಲ್ಲಿ 10 ಕ್ಯಾಚ್ ಹಿಡಿದಿರುವ ರಶೀದ್ ಖಾನ್ 7ನೇ ಸ್ಥಾನದಲ್ಲಿದ್ದಾರೆ.

11 ಪಂದ್ಯಗಳಲ್ಲಿ 9 ಕ್ಯಾಚ್ ಹಿಡಿದಿರುವ ಅಮನ್ ಹಕೀಮ್ ಖಾನ್ 8ನೇ ಸ್ಥಾನದಲ್ಲಿದ್ದಾರೆ.

ಇನ್ನು 14 ಪಂದ್ಯಗಳಲ್ಲಿ 9 ಕ್ಯಾಚ್ ಹಿಡಿದಿರುವ ಜೋಸ್ ಬಟ್ಲರ್ 9ನೇ ಸ್ಥಾನದಲ್ಲಿದ್ದಾರೆ.