ಗುಜರಾತ್ ತಂಡದಿಂದ ಆಶೀಶ್ ನೆಹ್ರಾಗೆ ಗೇಟ್​ಪಾಸ್?

10  August 2024

Pic credit: Google

ಪೃಥ್ವಿ ಶಂಕರ

Pic credit: Google

ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾಗೆ ಸಂಬಂಧಿಸಿದಂತೆ  ಬಿಗ್ ಅಪ್​ಡೇಟ್​ ಒಂದು ಹೊರಬಿದ್ದಿದೆ.

Pic credit: Google

ಮಾಧ್ಯಮ ವರದಿಗಳ ಪ್ರಕಾರ, ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಆಶಿಶ್ ನೆಹ್ರಾ ಅವರನ್ನು ತೆಗೆದುಹಾಕಬಹುದು ಎಂದು ಹೇಳಲಾಗುತ್ತಿದೆ.

Pic credit: Google

ಆಶಿಶ್ ನೆಹ್ರಾ ಕಳೆದ ಮೂರು ಆವೃತ್ತಿಗಳಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಒಂದು ಬಾರಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದಾರೆ.

Pic credit: Google

ಇದೀಗ ಗುಜರಾತ್ ತಂಡದಿಂದ ಆಶಿಶ್ ನೆಹ್ರಾ ಹೊರಬೀಳಬಹುದು ಎಂದು ಹೇಳಲಾಗುತ್ತಿದ್ದು ಅವರ ಸ್ಥಾನಕ್ಕೆ ಸಿಕ್ಸರ್ ಕಿಂಗ್ ಖ್ಯಾತಿಯ ಯುವರಾಜ್ ಸಿಂಗ್ ಬರಬಹುದು ಎಂದು ವರದಿಯಾಗಿದೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ.

Pic credit: Google

ಆಶಿಶ್ ನೆಹ್ರಾ ಐಪಿಎಲ್‌ನ ಅತ್ಯಂತ ದುಬಾರಿ ಕೋಚ್‌ಗಳಲ್ಲಿ ಒಬ್ಬರು. ಪ್ರತಿ ಸೀಸನ್​ಗೆ ನೆಹ್ರಾಗೆ 3.5 ಕೋಟಿ ರೂ. ವೇತನ ನೀಡಲಾಗುತ್ತಿತ್ತು.

Pic credit: Google

ಗುಜರಾತ್ ಟೈಟಾನ್ಸ್‌ನಿಂದ ಹೊರಗುಳಿದ ನಂತರ ಆಶಿಶ್ ನೆಹ್ರಾ ಯಾವ ಐಪಿಎಲ್ ತಂಡವನ್ನು ಸೇರುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

Pic credit: Google

ಇದಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬರದಿದ್ದರೂ, ಗುಜರಾತ್ ತಂಡವನ್ನು ನೆಹ್ರಾ ಯಾವ ರೀತಿ ಕಟ್ಟಿದರು ಎಂಬುದನ್ನು ಗಮನಿಸಿರುವ ಇತರ ಫ್ರಾಂಚೈಸಿಗಳು ನೆಹ್ರಾ ಹಿಂದೆ ಬೀಳುವುದು ಖಚಿತ.