ಆಗಸ್ಟ್​​ 23ಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಸ್ರೋ ಹೆಜ್ಜೆ!

20 August 2023

ಭಾರತದ ಮಹತ್ವಾಕಾಂಕ್ಷೆಯ ಇಸ್ರೋದ ಚಂದ್ರಯಾನ 3 ಲ್ಯಾಂಡರ್​​​ನ ಎರಡು ಹಂತದ ಡಿಬೂಸ್ಟಿಂಗ್ ಪ್ರಕ್ರಿಯೆ ಯಶಸ್ವಿಯಾಗಿದೆ.

20 August 2023

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯರ ಕನಸು ನನಸಾಗುವ ಹಂತಕ್ಕೆ ಬಂದಿದೆ.

20 August 2023

ಆಗಸ್ಟ್​​ 18ರಂದು ವಿಕ್ರಮ್ ಲ್ಯಾಂಡರ್​​​ನ ಮೊದಲ ಡಿಬೂಸ್ಟಿಂಗ್‌ ಯಶಸ್ವಿಯಾಗಿತ್ತು.

20 August 2023

ಈಗ ಎರಡು ಹಂತದ ವೇಗ ತಗ್ಗಿಸುವ ಪ್ರಕ್ರಿಯೆಯೂ  ಸಕ್ಸಸ್​ ​ಫುಲ್​​ ಆಗಿದ್ದು,ತಡರಾತ್ರಿ 1.50ಕ್ಕೆ ಲ್ಯಾಂಡರ್​​ನ ಡಿಬೂಸ್ಟಿಂಗ್​​​​​ ಕಾರ್ಯಾಚರಣೆ ನಡೆಸಲಾಗಿದೆ.

20 August 2023

113 ಕಿ.ಮೀ ಇನ್ಟು 157 ಕಿ.ಮೀ ಇದ್ದ ವೇಗವೂ ಸದ್ಯ 25 ಕಿ.ಮೀ ಇನ್ಟು 134 ಕಿ.ಮೀ ವೇಗಕ್ಕೆ ಡಿಬೂಸ್ಟಿಂಗ್​​ ಮಾಡಲಾಗಿದೆ.

20 August 2023

ಭಾರತದ ಕನಸು ನನಸಾಗಲು ಇನ್ನೊಂದೇ ಹೆಜ್ಜೆ ಬಾಕಿಯಿದ್ದು,ಆ.23 ರ ಸಂಜೆ 5.45ಕ್ಕೆ ಸಾಫ್ಟ್​​ ಲ್ಯಾಂಡಿಂಗ್​​​ ಕಾರ್ಯ ನಡೆಯಲಿದೆ.

20 August 2023

ಇದೇ ಹೊತ್ತಲ್ಲಿ ರಷ್ಯಾದ ಲೂನಾ-25 ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್ ವರದಿ ಮಾಡಿದೆ.

20 August 2023