ನೀವು ಸಿಹಿ ತಿಂಡಿ ಪ್ರಿಯರೇ, ಆದರೆ ಸಕ್ಕರೆ ಅಧಿಕ ಕ್ಯಾಲೋರಿಯನ್ನು ಹೊಂದಿದೆ ಎಂದು ಚಿಂತೆಯಲ್ಲಿದ್ದೀರಾ? ಹಾಗಿದ್ದರೆ ಬೆಲ್ಲದಿಂದ ಮಾಡಿದ ಸಿಹಿತಿಂಡಿಗಳನ್ನು ಸೇವಿಸಿ.

ಕಡಲೆಕಾಯಿ ಚಿಕ್ಕಿ: ಚಿಕ್ಕಿ ತುಪ್ಪ, ಬೆಲ್ಲ ಮತ್ತು ಕಡಲೆಕಾಯಿಯಿಂದ ಮಾಡಿದ ಸಾಂಪ್ರದಾಯಿಕ ಭಾರತೀಯ ಸಿಹಿ ತಿನಿಸು. ಜೊತೆಗೆ ಇದು ಆರೋಗ್ಯಕ್ಕೂ ಉತ್ತಮ.

ಅಲುಟುವಾ ಜನಪ್ರಿಯ ಬಂಗಾಳಿ ಸಿಹಿ ತಿಂಡಿಯಾಗಿದೆ. ಬೆಲ್ಲ, ಸಿಹಿಗೆಣಸು, ತುಪ್ಪಗಳಿಂದ ತಯಾರಿಸಲಾಗುತ್ತದೆ.

ಸೂಜಿ ಹಲ್ವಾ ಪಂಜಾಬಿನ ಅತ್ಯಂತ ಜನಪ್ರಿಯ ಸಿಹಿ ತಿಂಡಿಗಳಲ್ಲಿ ಒಂದಾಗಿದೆ. ಇದು ಬೆಲ್ಲ, ರವೆ, ಹಾಲಿನಿಂದ ತಯಾರಿಸಲಾಗುತ್ತದೆ. 

ಅಕ್ಕಿ ಉಂಡೆ: ಹುರಿದ ಅಕ್ಕಿ, ತುಪ್ಪ, ಗೊಬ್ಬರಿ ತುರಿ ಜೊತೆಗೆ ಬೆಲ್ಲದ ಸಿಹಿ ಪಾಕಗಳಲ್ಲಿ ಅಕ್ಕಿ ಉಂಡೆ ತಯಾರಿಸಲಾಗುತ್ತದೆ.

ಬೆಲ್ಲದ ಪಾಯಸ: ಬೆಂಗಾಳಿ ಭಾಗದ ಅತ್ಯಂತ ಜನಪ್ರಿಯ ಸಿಹಿ ತಿಂಡಿಗಳಲ್ಲಿ ಇದು ಪ್ರಮುಖವಾಗಿದೆ. ತುಪ್ಪ, ಅಕ್ಕಿ, ಹಾಲು ಮತ್ತು ಬೆಲ್ಲದೊಂದಿಗೆ ತಯಾರಿಸಲಾಗುತ್ತದೆ.

ಚುರ್ಮಾ ಲಡ್ಡು ರಾಜಸ್ಥಾನದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಒಂದಾಗಿದೆ. ವಿಶೇಷವಾಗಿ ಹಬ್ಬಗಳ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ. 

ಬೆಲ್ಲದ ಕೊಬ್ಬರಿ ಮಿಠಾಯಿಯನ್ನು ತುಪ್ಪದಲ್ಲಿ ಹುರಿದ ಕೊಬ್ಬರಿ, ಬೆಲ್ಲ ಹಾಕಿ ಅತ್ಯಂತ ಸುಲಭವಾಗಿ ತಯಾರಿಸಲಾಗುತ್ತದೆ.