ಹೆಣ್ಣಿನ ಅಂದವನ್ನು ಇಮ್ಮಡಿಗೊಳಿಸುವ ಆಭರಣಗಳು ಇಲ್ಲಿವೆ ನೋಡಿ
ಒಡವೆ, ಆಭರಣಗಳ ಜೊತೆ ಹೆಂಗಸರಿಗಂತೂ ವಿಶೇಷ ನಂಟು. ಇಲ್ಲಿವೆ ನೋಡಿ ಆಭರಣಗಳಿಂದಲೇ ಮಿಂಚಿದ ಸೆಲೆಬ್ರೆಟಿಗಳ ಫೋಟೋಗಳು.
ನಟಿ ಹುಮಾ ಖುರೇಷಿ ವಜ್ರದ ಮಲ್ಟಿಲೇಯರ್ಡ್ ನೆಕ್ಲೇಸ್ ಆಕೆಯ ಅಂದವನ್ನು ದುಪ್ಪಟ್ಟುಗೊಳಿಸಿದೆ. ಇಂತಹ ಆಭರಣಗಳು ಮದುವೆ ಸಮಾರಂಭಗಳಲ್ಲಿ ಉತ್ತಮ ಆಯ್ಕೆಯಾಗಿದೆ.
ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಸಂಪೂರ್ಣವಾಗಿ ಮುತ್ತಿನಿಂದಲೇ ಕುತ್ತಿಗೆಗೆ ಕವಚದಂತಿರುವ ನೆಕ್ಲೇಸ್ನಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಕಣ್ಣು ಕುಕ್ಕುವಂತೆ ವಜ್ರ ಹಾಗೂ ಪಚ್ಚೆ ರತ್ನದಿಂದ ವಿನ್ಯಾಸಗೊಳಿಸಲಾದ ನಟಿ ಪ್ರಿಯಾಂಕ ಚೋಪ್ರಾ ಧರಿಸಿದ್ದ ನೆಕ್ಲೇಸ್ ಇಲ್ಲಿದೆ ನೋಡಿ
ಇತ್ತೀಚಿನ ದಿನಗಳಲ್ಲಿ ಮೂಗುತ್ತಿ ಸುಂದರಿಯರು ಹೆಚ್ಚಾಗಿ ಕಂಡುಬರುತ್ತಿದ್ದಾರೆ. ನಟಿ ಜಾಹ್ನವಿ ಕಪೂರ್ ಧರಿಸಿರುವ ನೋಸ್ ರಿಂಗ್ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ನಟಿ ಸೋನಮ್ ಕಪೂರ್ ಧರಿಸಿರುವ ಇಯರ್‌ಕಫ್, ಬಳೆ ಹಾಗೂ ಉಂಗುರುಗಳು ಪಾರ್ಟಿ ಹಾಗೂ ನೈಟ್ ಪಾರ್ಟಿಗಳಿಗೆ ಉತ್ತಮ ಆಯ್ಕೆಯಾಗಿದೆ.