ಗಲ್ಲಿ ಗಲ್ಲಿಗೆ ಎಂಟ್ರಿಕೊಡಲು ಸಿದ್ದವಾದ ‘ಕಾಂತಾರ’ ಗಣಪ

18-Sep 2023

ಒಂದಕ್ಕಿಂತ ಒಂದು ನೋಡೋಕ್ಕೆ ಅಂದ ಅದಕ್ಕಿಂತ ಇದು ಇದಕ್ಕಿಂತ ಅದು ಅಂತ ನೋಡುಗರ ಕಣ್ಣು ಕುಕ್ಕುತ್ತಿರುವ ಹತ್ತಾರು ಬಗೆಯು ವಿವಿಧ ಬಗೆಯೆ ಗಣೇಶ ಮೂರ್ತಿಗಳು.

ಕಾಂತಾರ ಟ್ರೆಂಡಿಗ್ ಗಣೇಶ ತಯಾರಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ.

ಕಳೆದ 30 ವರ್ಷಗಳಿಂದ ರಾಜಗೋಪಾಲ್​ ಕುಟುಂಬ ಪರಿಸರ ಗಣೇಶ ಮೂರ್ತಿಗಳನ್ನ ಮಾಡುತ್ತಿದ್ದಾರೆ.

ಗಣೇಶ ತನ್ನ ಎಡ ಭಾಗದಲ್ಲಿ ಕಾಂತಾರದ ಪಂಜುರ್ಲಿ ದೈವವನ್ನ ಕೂರಿಸಿಕೊಂಡಿರುವ ಮೂರ್ತಿಗಳಿಗೆ ಹೆಚ್ಚಿನ ಡಿಮ್ಯಾಂಡ್ ಇದೆ.

ಈಗಾಗಲೇ ಯುವಕರು ಮುಗಿ ಬಿದ್ದಿದ್ದು, ಕಾಂತಾರ ಗಣೇಶ ಮೂಲಕ ಅದ್ದೂರಿ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ.

ಕಳೆದ ಭಾರಿ ಅಪ್ಪು ಗಣೇಶ ಎಲ್ಲರ ಗಮನ ಸೆಳೆದಿತ್ತು.

ಸದ್ಯ ಕಾಂತಾರ ಗಣೇಶ ಎಲ್ಲರ ಗಮನ ಸೆಳೆಯುತ್ತಿದೆ.

ರಾಜಗೋಪಾಲ್ ಕುಟುಂಬ ಈ ಭಾರಿ ಕಾಂತಾರ ಗಣೇಶನ ಮೂಲಕ ಕಮಾಲ್​ ಮಾಡುತ್ತಿದೆ.