ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಕರ್ನಾಟಕ ಬಜೆಟ್.
ಬಜೆಟ್ ಮಂಡನೆ ಆರಂಭದಲ್ಲೇ ವಿಧಾನ ಸಭೆಯಲ್ಲಿ ಗದ್ದಲ.
3 ಲಕ್ಷ ಕೋಟಿ ರೂ.ಗಿಂತಲೂ ದೊಡ್ಡ ಗಾತ್ರದ ಬಜೆಟ್ ಮಂಡಿಸಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.
ಈ ಬಾರಿಯ ಬಜೆಟ್ ಗಾತ್ರ 3.09 ಲಕ್ಷ ಕೋಟಿ ರೂ.
ಸಾಲದ ಪ್ರಮಾಣ ಕಡಿಮೆ ಮಾಡಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ಮೂಲಕ ಮಿಗತೆ (ಸರ್ ಪ್ಲಸ್) ಬಜೆಟ್ ಮಂಡನೆ.
ಕಳೆದ ಬಾರಿಯ ಬಜೆಟ್ ಗಾತ್ರಕ್ಕಿಂತ ಈ ಬಾರಿಯ ಬಜೆಟ್ ಗಾತ್ರ ಶೇ16ರಷ್ಟು ಹೆಚ್ಚು.
ಬಜೆಟ್ ಪ್ರಾರಂಭಿಸುವ ಮುನ್ನ ರಾಷ್ಟ್ರಕವಿ ಕುವೆಂಪು, ಕೆ. ಎಸ್ ನರಸಿಂಹಸ್ವಾಮಿ, ಡಾ. ಜಿ. ಎಸ್ ಶಿವರುದ್ರಪ್ಪರ ಕವಿತೆಗಳ ಉಲ್ಲೇಖ.