ಕರ್ನಾಟಕ ಚುನಾವಣೆ 2023: ಇದು ವೇತನ ಸಹಿತ ರಜೆಯೇ, ನಿಮಗೆ ಯಾವ ದಾಖಲೆಗಳು ಬೇಕಾಗುತ್ತವೆ, ಈ ರೀತಿಯ ಪ್ರಶ್ನೆಗಳಿಗೆ ಉತ್ತರ
ಮೇ 10 ವೇತನ ಸಹಿತ ರಜಾದಿನವೇ?
ಹೌದು, ಮತದಾನದ ದಿನದಂದು (ಮೇ 10) ವೇತನ ಸಹಿತ ರಜೆ ನೀಡುವಂತೆ ಭಾರತೀಯ ಚುನಾವಣಾ ಆಯೋಗವು ಸೂಚನೆ ನೀಡಿದೆ
ಮತದಾನದ ಸಮಯ ಎಷ್ಟರಿಂದ ಎಷ್ಟರ ವರೆಗೆ?
ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಕ್ಕೆ ಮುಕ್ತಾಯಗೊಳ್ಳುತ್ತದೆ
ಯಾವ ದಾಖಲೆಗಳಿಂದ ಮತದಾನ ಮಾಡಲು ಸಾಧ್ಯ?
ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಜನನ ಪ್ರಮಾಣಪತ್ರ ಚಾಲನಾ ಪರವಾನಿಗೆ ಭಾರತೀಯ ಪಾಸ್ಪೋರ್ಟ್ ಅಂಕಪಟ್ಟಿ
ಮತದಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಪರಿಶೀಲಿಸುವುದು ಹೇಗೆ?
ceokarnataka.kar.nic.in ಅಥವಾ ನಿಮ್ಮ ಮತದಾರರ ಗುರುತಿನ ಸಂಖ್ಯೆಯನ್ನು ಬಳಸಿಕೊಂಡು 'ಚುನಾವಣಾ' ಮೊಬೈಲ್ ಅಪ್ಲಿಕೇಶನ್ ಅಲ್ಲಿ ಪರಿಶೀಲಿಸಬಹುದು
ಮತ ಚಲಾಯಿಸಲು ಬೂತ್ ಹುಡುಕುವುದು ಹೇಗೆ?
ಚುನಾವಣಾ ಅಪ್ಲಿಕೇಶನ್‌ನಲ್ಲಿ 'ನಿಮ್ಮ ಬೂತ್ ತಿಳಿಯಿರಿ' ಲಿಂಕ್ ಮೂಲಕ
ಮತದಾರರಿಗೆ ವಿಶೇಷ ಸೌಲಭ್ಯ
ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ, ಚುನಾವಣಾ ಆಪ್ ಅಲ್ಲಿ ಪಿಕ್ ಮತ್ತು ಡ್ರಾಪ್ ಸೌಲಭ್ಯವಿದೆ.