ಕುಂದಾನಗರಿ ಬೆಳಗಾವಿಯಲ್ಲಿ ನಾಳೆಯಿಂದ ಚಳಿಗಾಲ ಅಧಿವೇಶನ ಆರಂಭ ಆಗಲಿದೆ.
03 Dec 2023
Author: Kiran Hanumant Madar
ಬೆಳಗಾವಿಯಲ್ಲಿ ನಡೆಯುವ 12 ನೇ ಅಧಿವೇಶನ ಇದಾಗಿದ್ದು, ಬೇಕಾದ ಸಿದ್ದತೆಗಳನ್ನ ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಸಂಪೂರ್ಣವಾಗಿ ಮಾಡಿಕೊಂಡಿದೆ.
12 ನೇ ಅಧಿವೇಶನ
ಮಂತ್ರಿಗಳು, ಶಾಸಕರು, ಅಧಿಕಾರಿ ವರ್ಗ, ಪೊಲೀಸ್ ಸಿಬ್ಬಂದಿ ಹೀಗೆ ಪ್ರತಿಯೊಬ್ಬರಿಗೂ ವಾಸ್ತವ್ಯದ ವ್ಯವಸ್ಥೆ ಜೊತೆಗೆ ಊಟದ ವ್ಯವಸ್ಥೆ ಕೂಡ ಆಗಿದೆ.
ವಾಸ್ತವ್ಯ
ಇತ್ತ ಈ ಬಾರಿಯೂ ಪ್ರತಿಭಟನೆಗಳ ಕಾವು ಸರ್ಕಾರ ತಟ್ಟಿಲ್ಲಿದೆ. ಈ ಮಧ್ಯೆ ಎಂಇಎಸ್ ಮತ್ತೆ ಕ್ಯಾತೆ ತೆಗೆದಿದ್ದು, ಪೊಲೀಸರು ಖಡಕ್ ವಾರ್ನ್ ಮಾಡಿದ್ದಾರೆ.
ಪ್ರತಿಭಟನೆಗಳ ಕಾವು
ಪ್ರತಿಭಟನಾ ಸ್ಥಳ ಸೇರಿದಂತೆ ಸುತ್ತ ಎಲ್ಲಾ ಕಡೆಯೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದು, ಒಂದು ಕಂಟ್ರೋಲ್ ರೂಮ್ ಇದ್ದು ಅದರಲ್ಲಿ ಎಲ್ಲವನ್ನೂ ಕಂಟ್ರೋಲ್ ಮಾಡಿಕೊಳ್ಳಲಾಗಿದೆ.
ಕಂಟ್ರೋಲ್ ರೂಂ
ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ಈಗಾಗಲೇ ಎರಡು ಸಾವಿರ ರೂಮ್ ಗಳು ಹಂಚಿಕೆಯಾಗಿದ್ದು, ಅಲ್ಲೇ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ.
2 ಸಾವಿರ ರೂಮ್
ಚೀನಾ ವೈರಸ್ ಆತಂಕ ಹಿನ್ನೆಲೆ ಈ ಬಾರಿ ಸಚಿವರು ಶಾಸಕರು ತಂಗುವ ಹೋಟೆಲ್ಗಳಲ್ಲೇ ಒಂದೊಂದು ವೈದ್ಯರ ತಂಡ ನೇಮಕವಾಗಿದೆ. ಒಂದೊಂದು ಆ್ಯಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಿದ್ದಾರೆ.
ವೈದ್ಯರ ತಂಡ
ಇತ್ತ ಸುವರ್ಣ ವಿಧಾನಸೌಧದಲ್ಲಿ ಒಂದು ಮಿನಿ ಆಸ್ಪತ್ರೆ ಕೂಡ ಮಾಡಲಾಗಿದೆ. ಹೀಗೆ ಅಧಿವೇಶನಕ್ಕೆ 16ಜನರ ವೈದ್ಯರ ಪ್ರತ್ಯೆಕ ತಂಡ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ.
ಮಿನಿ ಆಸ್ಪತ್ರೆ
ಒಟ್ಟು 17.5ಕೋಟಿ ವೆಚ್ಚದಲ್ಲಿ ಅಧಿವೇಶನ ನಡೆಸುತ್ತಿದ್ದು, ಈ ಬಜೆಟ್ನಲ್ಲೇ ಕಡಿಮೆ ಮಾಡಲು ಜಿಲ್ಲಾಡಳಿತ ಪ್ಲ್ಯಾನ್ ಮಾಡಿಕೊಂಡು, ಅದರಂತೆ ಇರೋದರಲ್ಲೇ ಒಳ್ಳೆಯ ಸೌಲಭ್ಯ ಕೊಟ್ಟು ಖರ್ಚು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
17.5ಕೋಟಿ ವೆಚ್ಚ
ಈ ಬಾರಿ ಅಧಿವೇಶನ ನೋಡಲು ಬರುವ ಮಕ್ಕಳಿಗೆ ಐದು ಮಿನಿ ಬಸ್ ವ್ಯವಸ್ಥೆ, ಯುವಜನ ಸೇವೆ ವತಿಯಿಂದ ಸೌಧದಲ್ಲಿ ಆರ್ಟಿಫೀಸಿಯಲ್ ವಾಲ್ ಕ್ಲೈಮಿಂಗ್ ಮಕ್ಕಳಿಗೆ ಕೊಡಲಾಗುತ್ತಿದೆ.
ಯುವಜನ
ಸುವರ್ಣ ಸೌಧದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡಲಾಗುತ್ತಿದೆ ಎಂದು ಡಿಸಿ ನಿತೇಶ್ ಪಾಟೀಲ್ ಹೇಳಿದ್ದಾರೆ.
ಡಿಸಿ ನಿತೇಶ್ ಪಾಟೀಲ್
ಟಿಕೆಟ್ ಪಡೆದು ಎಲ್ಲೆಂದರಲ್ಲಿ ಇಳಿತಾರೆ ಮಹಿಳೆಯರು! ಸಸ್ಪೆಂಡ್ ಆಗ್ತಿದ್ದಾರೆ ಕಂಡಕ್ಟರ್ಗಳು