Vivek Biradar

09 Jan 2025

 ಬೀದರ್​​ನ ಗುರುದ್ವಾರ ಸಿಖ್ಖರ ಪವಿತ್ರ ಯಾತ್ರಾ ಸ್ಥಳ

Pick Creadit- Suresh Nayak

ಬೀದರ್​​ನ ಗುರುದ್ವಾರ ಸಿಖ್ಖರ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಗುರುನಾನಕ್ ಝರಾಕ್ಕೆ ಪ್ರತಿ ವರ್ಷ ನವೆಂಬರ್ ಮತ್ತು ಮಾರ್ಚ್ ತಿಂಗಳಲ್ಲಿ ದೂರದ ಪಂಜಾಬ್, ಹರಿಯಾಣಾ, ರಾಜಸ್ಥಾನ ಸೇರಿದಂತೆ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. 

ಗುರುದ್ವಾರದ ಒಳಗಡೆ ಪ್ರವೇಶಿಸಬೇಕಾದರೆ ಶಿರದ ಮೇಲೆ ವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು.  ಗುರುದ್ವಾರದ ಒಳಗಡೆ ಸಿಖ್ಖರ ಪವಿತ್ರ ಧರ್ಮಗ್ರಂಥವಾದ "ಗುರು ಗ್ರಂಥ್ ಸಾಹೇಬ್" ಅನ್ನು ದರ್ಶನಕ್ಕೆ  ಇಡಲಾಗಿದೆ. ದಿನದ 24 ಗಂಟೆಯೂ ಇಲ್ಲಿ ಭಜನೆ ನಡೆಯುತ್ತದೆ. 

ಧರ್ಮ ಪ್ರಚಾರಕ್ಕೆಂದು ಬರಗಾಲದ ಸಮಯದಲ್ಲಿ ಗುರುನಾನಕರು ಬೀದರ್​ಗೆ ಬಂದಿದ್ದರು. ಈ ವೇಳೆ ಗುರುನಾನಕರು ಬೆಟ್ಟದ ಒಂದು ಭಾಗಕ್ಕೆ ತೆರಳಿ ದೇವರ ನಾಮಸ್ಮರಣೆ ಮಾಡುತ್ತಾ ತಮ್ಮ ಕಾಲಿನ ಹೆಬ್ಬೆರಳನ್ನು ನೆಲಕ್ಕೆ ತಾಗಿಸಿ, ಮಣ್ಣಿನ ಮೇಲ್ಭಾಗವನ್ನು ಸ್ವಲ್ಪ ಕದಡಿದರು. ಈ ವೇಳೆ ಅಲ್ಲಿ ಪವಿತ್ರವಾದ, ತಿಳಿಯಾದ ಕುಡಿಯುವ ನೀರು ಕಾರಂಜಿಯಂತೆ ಚಿಮ್ಮಿತು. 

ಇದರಿಂದಾಗಿ ಈ ಪವಿತ್ರ ಸ್ಥಳಕ್ಕೆ "ನಾನಕ ಝೀರ" ಎಂದು ಹೆಸರಿಡಲಾಗಿದೆ. ಇಂದಿಗೂ ಇಲ್ಲಿ ಸತತವಾಗಿ ನೀರಿನ ಝರಿ ಹರಿಯುತ್ತದೆ. ಈ ನೀರನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳನ್ನು ಗುಣಮುಖವಾಗುತ್ತವೆ ಎಂಬ ನಂಬಿಕೆಯಿದೆ. 

ಇಲ್ಲಿಂದ ಹರಿದು ಬಂದ ನೀರನ್ನು ಗುರುದ್ವಾರದ ಮುಂದೆ ಇರುವ ಕಲ್ಯಾಣಿಗೆ ಬಿಡಲಾಗಿದೆ. ಈ ಕಲ್ಯಾಣಿಯಲ್ಲಿ ಭಕ್ತರು ಮಿಂದು ದೇವರ ದರ್ಶನ ಪಡೆಯುತ್ತಾರೆ. ದೇವಸ್ಥಾನದ ವಸತಿ ಗೃಹಗಳಿದ್ದು ಬಂದವರಿಗೆ ಉಳಿದುಕೊಳ್ಳಲು ಸೌಲಭ್ಯ ಕಲ್ಪಿಸಲಾಗಿದೆ. 

ದೇವಸ್ಥಾನವು ತುಂಬಾ ಶುಚಿಯಾಗಿ ಮತ್ತು ಉತ್ತಮವಾಗಿ ನೋಡಿಕೊಳ್ಳಲಾಗಿದೆ. ದೇವಸ್ಥಾನ ಪ್ರದೇಶದ ಸುತ್ತಮುತ್ತಲು ತುಂಬಾ ಹಸಿರಿನ ವಾತಾವರಣವಿದ್ದು, ಇಲ್ಲಿ ನಿರ್ಮಿಸಲಾಗಿದ್ದ ಹೂದೋಟ ಮತ್ತು ಉದ್ಯಾನವನ ಸುಂದರವಾಗಿದೆ. 

ಇಲ್ಲಿ ಪ್ರತಿದಿವೂ ಊಟದ ವ್ಯವಸ್ಥೆ ಇರುತ್ತದೆ. ಇದಕ್ಕೆ ಲಂಗರ್ ಎಂದು ಕರೆಯುತ್ತಾರೆ. ಪ್ರತಿ ವರ್ಷ ಗುರುನಾನಕ ಝಿರಾದಲ್ಲಿ ಗುರುನಾನಕ್​ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗುರುನಾನಕರ ಜಯಂತಿಗೆ ರಾಜ್ಯ ಸೇರಿದಂತೆ ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.  

ಧಾರವಾಡ ಬಂದ್​