ಹಾವೇರಿಯಲ್ಲಿ ಜರುಗಿದ ಅದ್ದೂರಿ ಹೋರಿ ಹಬ್ಬ, ಇಲ್ಲಿದೆ ಝಲಕ್ 

13 Dec 2023

Author: Kiran Hanumant Madar

 ಶರವೇಗದಲ್ಲಿ ಓಟ ಓಡ್ತಿರೋ ಹೋರಿಗಳನ್ನು ನೋಡಿ ಹೋರಿ ಅಭಿಮಾನಿಗಳಿಂದ ಕೇಕೆ, ಸಿಳ್ಳೆ, ಚಪ್ಪಾಳೆಗಳ ಸದ್ದು ಮೇರೆ‌‌ ಮೀರಿತ್ತು.

ಸಿಳ್ಳೆ, ಚಪ್ಪಾಳೆ

 ಹಾವೇರಿ‌ ತಾಲೂಕಿನ ಕಬ್ಬುರ ಗ್ರಾಮದಲ್ಲಿ ಅದ್ದೂರಿ ಹೋರಿ ಹಬ್ಬ ಆಯೋಜನೆ ಮಾಡಲಾಗಿತ್ತು.

ಹೋರಿ ಹಬ್ಬ

ಅಖಾಡದಲ್ಲಿ ಧೂಳೆಬ್ಬಿಸಿಕೊಂಡು ಓಡ್ತಿದ್ದ ಹೋರಿಗಳು ನೆರೆದಿದ್ದ ಜನರಿಗೆ ಸಖತ್ ಮನರಂಜನೆ ನೀಡಿದವು.

ಅಖಾಡ

 ಕೆಲವು ಹೋರಿಗಳಂತೂ ಗೆಲುವು ನಂದೆ, ನನ್ನನ್ನ ಮುಟ್ಟಬೇಡಿ ಎಂದು ಗುರಾಯಿಸಿಕೊಂಡು ಓಟ‌ ಕಿತ್ತುತ್ತಿದ್ದವು.

ಓಟ‌

 ಹೋರಿ ಹಬ್ಬದಲ್ಲಿ ಜಮಾಯಿಸಿದ್ದ ಪೈಲ್ವಾನರು ಹೋರಿ ಹಿಡಿಯಲು ಪ್ರಯತ್ನ ಮಾಡ್ತಿದ್ರೂ, ಅವರ ಕೈಗೆ ಸಿಗದಂತೆ ಮಿಂಚಿನ ಓಟ ಓಡುತ್ತಿದ್ವು.

ಕೈಗೆ ಸಿಗದ ಹೋರಿ

ಅಖಾಡದಲ್ಲಿ ಓಡೋ ಹೋರಿಗಳನ್ನ ಹಿಡಿದು ನಿಲ್ಲಿಸಿದವರಿಗೆ ಬೆಳ್ಳಿಯ ಕಡೆ ಸೇರಿದಂತೆ ಒಟ್ಟು ನಾಲ್ಕು ಬಗೆಯ ಬಹುಮಾನ ಇಟ್ಟಿದ್ರು.

ಬಹುಮಾನ 

 ಹಾವೇರಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿದೆಡೆಯಿಂದ ಐನೂರಕ್ಕೂ ಅಧಿಕ ಹೋರಿಗಳ ಆಗಮನವಾಗಿತ್ತು.

ಐನೂರಕ್ಕೂ ಅಧಿಕ

ಕೆಲವು ಹೋರಿಗಳಿಗೆ ಆಗಸದೆತ್ತರಕ್ಕೆ ಚಟ್ಟ್, ಬಲೂನ್‌ಗಳನ್ನ ಕಟ್ಟಿ ಅಲಂಕಾರ ಮಾಡಿದ್ದರು.

ಬಲೂನ್‌

ಅಧಿವೇಶನ ವೀಕ್ಷಣೆಗೆ ಬಂದ ವಿದ್ಯಾರ್ಥಿಗಳ ಜೊತೆ ಸಮಯ ಕಳೆದ ಸಿಎಂ