ಶಕ್ತಿ ಯೋಜನೆಗೆ ಕಂಗೆಟ್ಟ ಆಟೋ ಚಾಲಕರಿಗೆ ಜಾತಿ ಕಾಟ; ಬಾಡಿಗೆ ಸಿಗದೆ ಕಂಗಾಲು

22 Dec 2023

Author: Kiran Hanumant Madar

ಮೊದಲೇ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆ ಚಾಲಕರ ಕೆಲಸವನ್ನು ಹಾಳು ಮಾಡಿದೆ.

ಶಕ್ತಿ ಯೋಜನೆ

 ಸಾಲದ ಕಂತು ಕಟ್ಟಿ ಸಂಸಾರ ನಡೆಸೋದೆ ಕಷ್ಟವಾಗಿದೆ. ಇವಾಗ ಗದಗ ಬೆಟಗೇರಿ ಅವಳಿ ನಗರದಲ್ಲಿ ಹೊಸದೊಂದು ಸಮಸ್ಯೆ ಎದುರಾಗಿದೆ.

ಸಮಸ್ಯೆ 

ಗದಗ ಬೆಟಗೇರಿ ಅವಳಿ ನಗರದಲ್ಲಿ ಜಾತಿ ಕಾಟ ಆರಂಭವಾಗಿದೆ ಎಂದು ಆಟೋ ಚಾಲಕರು ಗಂಭೀರವಾದ ಆರೋಪ ಮಾಡಿದ್ದಾರೆ.

ಜಾತಿ ಕಾಟ

ಗದಗ ಬೆಟಗೇರಿ ಅವಳಿ ನಗರದ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಮ್ಸ್ ಆಸ್ಪತ್ರೆ ಆವರಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೆಲವು ಜಾತಿಯವರಿಗೆ ಪಾಳಿ ನಿಡ್ತಾಯಿಲ್ವಂತೆ.

ಪಾಳಿ

ಅದರಲ್ಲೂ ಪರಿಶಿಷ್ಟ ಜಾತಿಯ ಕೊರಮ, ಭಜಂತ್ರಿ, ವಾಲ್ಮೀಕಿ ಜಾತಿಗೆ ಸೇರಿದವರಿಗೆ ಪಾಳಿ ನೀಡ್ತಾಯಿಲ್ಲಾ ಎಂದು ಆರೋಪ ಮಾಡಿದ್ದಾರೆ.

ಗಂಭೀರ ಆರೋಪ

ಸಾಲ ಸೂಲ ಮಾಡಿ ಆಟೋ ಖರೀದಿ ಮಾಡಿದ್ದೇವೆ, ಈವಾಗ ಪ್ರಮುಖ ಸ್ಥಳದಲ್ಲಿ ಆಟೋ ಸ್ಟ್ಯಾಂಡ್ ನಲ್ಲಿ ಪಾಳಿ ನೀಡ್ತಾಯಿಲ್ಲ. ಹೀಗಾಗಿ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯಾಗಿದೆ.

ಆರ್ಥಿಕ ಸಮಸ್ಯೆ

ಈ ಜಾತಿ ತಾರತಮ್ಯ ನೀತಿ ನಿವಾರಣೆ ಮಾಡಿ, ನಮಗೆ ಎಲ್ಲಾ ಕಡೇ ಪಾಳಿ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ತಾರತಮ್ಯ 

 ಅವಳಿ ನಗರದ ಕೆಲವು ಆಟೋ ಚಾಲಕರು, ಸಮಸ್ಯೆ ಬಗೆಹರಿಸಲು ಗದಗ ಎಸ್ಪಿ ಬಿಎಸ್ ನೇಮಗೌಡ ಅವರಗೆ ಮನವಿ ಸಲ್ಲಿಸಿದ್ದಾರೆ. 

ಎಸ್ಪಿಗೆ  ಮನವಿ 

ಕೊಡಗು ಶ್ವಾನ ದಳದ‌ ಲಿಯೋ ಕೊನೆ ಉಸಿರು; ಕಂಬನಿ ಮಿಡಿದ ಪೊಲೀಸ್‌ ಸಿಬ್ಬಂದಿ‌