ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ; ಕಣ್ಮನ ಸೆಳೆದ ಪುತ್ತರಿ ಕೋಲಾಟ

29 Nov 2023

Author: Kiran Hanumant Madar

 ವಿಶಿಷ್ಟ ಸಂಸ್ಕೃತಿಗಳ ತವರೂರಾಗಿರುವ ಕೊಡಗು ಜಿಲ್ಲೆಯಲ್ಲಿ ಹುತ್ತರಿ ಹಬ್ಬದ ಸಂದರ್ಭದಲ್ಲಿ ವಿವಿಧೆಡೆ ನಡೆಯುವ ಪುತ್ತರಿ ಕೋಲಾಟ ಕಣ್ಮನ ಸೂರೆಗೊಳ್ಳುತ್ತದೆ.

ಪುತ್ತರಿ ಕೋಲಾಟ

 ಕೊಡಗಿನ ರಾಜ ಮಹಾರಾಜರು ಆಳಿ ಮೆರೆದ ಭವ್ಯ ಅರಮನೆ ಅಂಗಳದಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಮಹಿಳೆಯರು, ಪುರುಷರು, ಮಕ್ಕಳು ಕುಣಿಯುತ್ತಾರೆ.

ಅರಮನೆ ಅಂಗಳ

 ಮಡಿಕೇರಿ ಕೋಟೆ ಆವರಣ, ಜಿಲ್ಲೆಯ ವಿವಿಧೆಡೆ ಹುತ್ತರಿ ಹಬ್ಬವನ್ನ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಹುತ್ತರಿ ಹಬ್ಬ

ಹುತ್ತರಿ ಹಬ್ಬದ ಮರುದಿನ ಮಡಿಕೇರಿ ಕೊಟೆ ಆವರಣದಲ್ಲಿ ಪಾಂಡಿರ ಕುಟುಂಬಸ್ಥರಿಂದ ಹುತ್ತರಿ ಕೋಲಾಟ ಸಂಭ್ರಮ ನಡೆಯುತ್ತದೆ.

ಕೊಟೆ ಆವರಣ

ಪುರುಷರು, ಮಕ್ಕಳು ಕೋಲಾಟ, ಕತ್ತಿಯಾಟ, ಪರೆ ಕಳಿ, ಪೀಲಿಯಾಟ ಆಡಿದ್ರೆ, ಮಹಿಳೆಯರು ಉಮ್ಮತ್ತಾಟ್ ಆಡಿ ಸಂಭಮಿಸಿದರು.

ಮಹಿಳೆಯರು ಉಮ್ಮತ್ತಾಟ್

ಕೊಡಗಿನ ಕುಲದೇವಿ ಕಾವೇರಿ ಮಾತೆ ಮತ್ತು ಪ್ರಕೃತಿಯನ್ನ ಸ್ತುತಿಸಿ ಈ ನೃತ್ಯ ಆಡಲಾಗುತ್ತದೆ.

ಕುಲದೇವಿ ಕಾವೇರಿ

ಈ ಕಾರ್ಯಕ್ರಮಕ್ಕೆಂದೇ ಪುಟ್ಟ ಮಕ್ಕಳನ್ನ ಕೂಡ ತಯಾರುಗೊಳಿಸಲಾಗಿರುತ್ತದೆ.

ಪುಟ್ಟ ಮಕ್ಕಳು

ನೂರಾರು ವರ್ಷಗಳಿಂದ ನಡೆದು ಬಂದಿರುವ ಈ ವಿಶಿಷ್ಟ ಸಂಸ್ಕೃತಿ ಇಂದಿಗೂ ಇಲ್ಲಿನ ಜನಜೀವನದ ಅವಿಭಾಜ್ಯ ಅಂಗವಾಗಿದೆ.

ವಿಶಿಷ್ಟ ಸಂಸ್ಕೃತಿ

ಮುನ್ನೂರು ವರ್ಷಗಳ ಹಿಂದೆ ರಾಜ ಮಹಾರಾಜರ ಸಮ್ಮುಖದಲ್ಲಿ ಈ ಕೋಲಾಟವಾಡಿ ಸಂಬ್ರಮಿಸಲಾಗುತ್ತಿತ್ತು.

ವರ್ಷಗಳ ಹಿಂದೆ

ಮದುವೆಗೆ ರೆಡಿಯಾಗುತ್ತಿದ್ದೀರಾ? ಹೊಳೆಯುವ ತ್ವಚೆಗೆ ಈ ಜ್ಯೂಸ್ ಸೇವಿಸಿ