ಚಿತ್ರದುರ್ಗ ಜಿಲ್ಲೆಯಲ್ಲಿ ಶಾಲಾ ಕಟ್ಟಡ ಕುಸಿದು ಬೀಳುವ ಸ್ಥಿತಿ; ಮರದ ಕೆಳಗೆ ವಿದ್ಯಾರ್ಥಿಗಳಿಗೆ ಪಾಠ

07 Dec 2023

Author: Kiran Hanumant Madar

ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದು ಬೀಳುವ ಸ್ಥಿತಿ ತಲುಪಿದೆ.

ಶಾಲೆಯ ಕಟ್ಟಡ 

ಎಲ್ಲಿ ಕಟ್ಟಡ ಬಿಳುತ್ತದೇಯೋ ಎಂಬ ಭಯದಲ್ಲಿ ಶಾಲಾ ಅಂಗಳದಲ್ಲಿರುವ ಮರದ ಕೆಳಗೆ ಪಾಠ ಮಾಡಲಾಗುತ್ತಿದೆ.

ಮರದ ಕೆಳಗೆ ಪಾಠ 

 ಇದರಿಂದ ಮಂಗಗಳು ಸೇರಿದಂತೆ ಹಾವು, ಚೇಳಿನ ಭಯದಲ್ಲೇ ವಿದ್ಯಾರ್ಥಿಗಳ ವಿದ್ಯಭ್ಯಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಂಗಗಳು 

ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇನೋ ಗಣನೀಯವಾಗಿದೆ. ಆದ್ರೆ, ಶಾಲಾ ಕೊಠಡಿ ನಿರ್ಮಿಸುವಲ್ಲಿ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ವಿಫಲವಾಗಿದೆ.

ಶಾಲಾ ಕೊಠಡಿ

ಕೊಠಡಿಗಳ ಪೈಕಿ 2 ಕೊಠಡಿಗಳು ಹಳೆಯ ಕಾಲದ್ದಾಗಿದ್ದು, ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ.

ಶಿಥಿಲಾವಸ್ಥೆ 

ಈ ಹಿನ್ನಲೆ ಅನುಪಯುಕ್ತ ಕೊಠಡಿಗಳನ್ನೂ ಹಾಗೇ ಬಿಟ್ಟ ಶಿಕ್ಷಕರು, ಶಾಲಾ ಅಂಗಳದಲ್ಲಿ ಅಥವಾ ಮರದ ಕೆಳಗೆ ಪಾಠ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. 

ಶಾಲಾ ಅಂಗಳ

ಈ ಮೂಲಕ ಮಳೆ , ಚಳಿ, ಗಾಳಿ-ಬಿಸಿಲಿಗೆ ವಿದ್ಯಾರ್ಥಿಗಳು ಮೈಯೊಡ್ಡುವ ಅನಿವಾರ್ಯತೆ ಎದುರಾಗಿದೆ. 

ವಿದ್ಯಾರ್ಥಿಗಳು 

ಜನಪ್ರತಿನಿಧಿಗಳು ಮತ್ತು ಸಂಬಂಧಿತ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ.

ಜನಪ್ರತಿನಿಧಿಗಳು 

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವ್ರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಈ ಶಾಲೆಯ ಹಳೇ ವಿದ್ಯಾರ್ಥಿಯ ಮನವಿ.

ವಿದ್ಯಾರ್ಥಿಯ ಮನವಿ

ರಾಕ್​ಸ್ಟಾರ್​ ಹೋರಿಯ ಹುಟ್ಟುಹಬ್ಬ; ಅಭಿಮಾನಿಗಳಿಂದ ಕೇಕ್​ ಕತ್ತರಿಸಿ ಸಂಭ್ರಮ