ಶಕ್ತಿ ಯೋಜನೆ ಪ್ರಗತಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ ಏನಂದರು ನೋಡಿ
22 November 2023
ಶಕ್ತಿ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ, ಈವರೆಗೆ ಯೋಜನೆಯಡಿ 99.75 ಕೋಟಿ ಟಿಕೆಟ್ ವಿತರಿಸಲಾಗಿದೆ ಎಂದರು.
ಶಕ್ತಿ ಯೋಜನೆ ಪ್ರಗತಿ ಪರಿಶೀಲನೆ
ಶಕ್ತಿ ಯೋಜನೆ ಜಾರಿಯಾದಾಗಿನಿಂದ ನ.21ರವರೆಗೆ ಉಚಿತ ಪ್ರಯಾಣ 99 ಕೋಟಿ ದಾಟಿದ್ದು, ಇನ್ನೆರಡು ದಿನಗಳಲ್ಲಿ 100 ಕೋಟಿ ದಾಟಲಿದೆ ಎಂದು ವರದಿ ಸಲ್ಲಿಕೆಯಾಗಿದೆ.
100 ಕೋಟಿ ದಾಟಲಿದೆ!
ಶಕ್ತಿ ಯೋಜನೆ ಜಾರಿ ನಂತರ ಮಾಸಿಕ 1.15 ಕೋಟಿ ಸ್ತ್ರೀಯರಿಗೆ ಟಿಕೆಟ್ ವಿತರಣೆ ಮಾಡಲಾಗಿದೆ.
ತಿಂಗಳಿಗೆ ಎಷ್ಟು?
ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಒಟ್ಟು 828 ಸಾಮಾನ್ಯ ಬಸ್ಗಳು, ವಿದ್ಯುತ್ ಚಾಲಿತ 145 ಬಸ್ಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ಹೊಸ ಬಸ್ ಸೇರ್ಪಡೆ
ನಿಗದಿತ ಸಮಯದಲ್ಲಿ ಬಸ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಸಿಎಂ ಸೂಚನೆ ನೀಡಿದ್ದಾರೆ.
ಬಸ್ ಖರೀದಿಗೆ ಸೂಚನೆ
ತಿಂಗಳ ಸರಾಸರಿ ಪ್ರಯಾಣಿಕರ ಸಂಖ್ಯೆ ಏಪ್ರಿಲ್ 2023 ರಲ್ಲಿ 84.17 ಲಕ್ಷ ಇತ್ತು.
ಸರಾಸರಿ ಪ್ರಯಾಣಿಕರ ಸಂಖ್ಯೆ
ಶಕ್ತಿ ಯೋಜನೆ ಜಾರಿಯ ನಂತರ ತಿಂಗಳ ಸರಾಸರಿ ಪ್ರಯಾಣಿಕರ ಸಂಖ್ಯೆ 1.08 ಕೋಟಿಯಿಂದ 1.15 ಕೋಟಿ ವರೆಗೆ ಹೆಚ್ಚಳವಾಗಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳ
ಶಕ್ತಿ ಯೋಜನೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾಗಿದೆ.
ಮಹತ್ವಾಕಾಂಕ್ಷಿ ಯೋಜನೆ
ಕಾಂಗ್ರೆಸ್ ಸರ್ಕಾರದ ವಿರುದ್ಧ ರೇವಣ್ಣ ಆಕ್ರೋಶ
ಮತ್ತಷ್ಟು ನೋಡಿ