ಅಶೋಕನ‌‌ ಕಾಲದಿಂದ ಮೋದಿ ಕಾಲದ ವರೆಗಿನ

Author: Rakesh Nayak Manchi

ಕರೆನ್ಸಿ ಪ್ರದರ್ಶನ

1 ಪೈಸೆಯಿಂದ 1 ಕೋಟಿ ವರೆಗಿನ ನೋಟು

12 Dec 2023

ರಾಮನಗರದಲ್ಲೊಂದು ಡಿಫ್ರೆಂಟ್ ಕರೆನ್ಸಿ ಪ್ರದರ್ಶನ ನಡೆಯಿತು.

ಅಶೋಕನ‌‌ ಕಾಲದಿಂದ ಹಿಡಿದು ಮೋದಿ ಕಾಲದ ವರೆಗಿನ ಕರೆನ್ಸಿಗಳನ್ನು ಪ್ರದರ್ಶನ ಮಾಡಲಾಯಿತು.

ಒಂದು ಪೈಸೆಯಿಂದ ಒಂದು ಕೋಟಿ ವರೆಗಿನ ನೋಟುಗಳನ್ನು ಪ್ರದರ್ಶನ ಮಾಡಲಾಯಿತು.

ರಾಮನಗರ ಪಟ್ಟಣದ ರಾಯರದೊಡ್ಡಿ ಸರ್ಕಲ್‌ ಬಳಿಯ ಚೌಟರಿಯಲ್ಲಿ ಕರೆನ್ಸಿಗಳ ಪ್ರದರ್ಶನ ನಡೆಯಿತು.

ಕೆ ವಿಶ್ವನಾಥ್ ಎಂಬುವವರು ಈ ಕರೆನ್ಸಿಗಳನ್ನು ಸಂಗ್ರಹ ಮಾಡಿದ್ದಾರೆ.

ಕರೆನ್ಸಿ ನೋಡಲು ವಿದ್ಯಾರ್ಥಿಗಳ ಸಮೂಹ ಹರಿದು ಬಂತು.

ಅಶೋಕ, ಮಗಧ ಸಾಮ್ರಜ್ಯದ ನಾಣ್ಯಗಳನ್ನು ಪ್ರದರ್ಶನ ಮಾಡಲಾಯಿತು.

ವಿಶ್ವದ ಅತಿ ಚಿಕ್ಕ ನಾಣ್ಯ, ಆದಿಲ್ ಶಾಹ್​ನ ವಿಚಿತ್ರ ಪಿನ್ ನಾಣ್ಯ ಪ್ರದರ್ಶನಗಳನ್ನು ಮಾಡಲಾಯಿತು.

ವಿಜಯನಗರ ಸಾಮ್ರಜ್ಯದ ಅತಿ ಚಿಕ್ಕ ನಾಣ್ಯ ನೋಡಿ ವಿದ್ಯಾರ್ಥಿಗಳು ಆಶ್ಚರ್ಯ ಪಟ್ಟರು.

ಯುಗಸ್ಲೇವಿಯ ಹತ್ತು ಕೋಟಿಯ ನೋಟುಗಳನ್ನು ಪ್ರದರ್ಶನ ಮಾಡಲಾಯಿತು.

ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಈ ಕರೆನ್ಸಿಗಳನ್ನು ವಿಶ್ವನಾಥ್ ಅವರು ಪ್ರದರ್ಶನಕ್ಕಿಟ್ಟಿದ್ದಾರೆ.

ಗಂಗರ, ಚೋಳರ, ಶಾತವಾಹನ, ಮೊಗಲರ, ಮೈಸೂರು ಒಡೆಯರ ಕಾಲದ ಕರೆನ್ಸಿಗಳನ್ನು ಪ್ರದರ್ಶನ ಮಾಡಲಾಯಿತು.

197 ದೇಶದ ಕರೆನ್ಸಿಗಳನ್ನು ಒಂದೇ ಕಡೆ ನೋಡಿ ವಿದ್ಯಾರ್ಥಿಗಳು ಫುಲ್ ಖುಷ್ ಆದರು.

ಬೆಂಗಳೂರಿನ ನಿವಾಸಿ ಕೆ ವಿಶ್ವನಾಥ್, ಬೆಂಗಳೂರಿನ‌ ಯುನಿಟಿ ಬಿಲ್ಡಿಂಗ್ ನಲ್ಲಿ ಖಾಸಗೀ ಕಂಪನಿ‌ ನಡೆಸುತ್ತಿದ್ದರು.

ಕೆ ವಿಶ್ವನಾಥ್ ಪರಿಚಯ

35 ವರ್ಷಗಳಿಂದ ವಿವಿಧ ದೇಶದ ನಾಣ್ಯಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಮೊದಲಿಗೆ ಭಾರತದ ಹಳೇಯ ನಾಣ್ಯ, ಕರೆನ್ಸಿಗಳನ್ನು ಸಂಗ್ರಹ ಮಾಡಿದ್ದಾರೆ.

ಪ್ರೋತ್ಸಾಹ ಸಿಕ್ಕಂತೆ ಇನ್ನಷ್ಟು ಕರೆನ್ಸಿ ಸಂಗ್ರಹ ಮಾಡಿದ ಕೆ ವಿಶ್ವನಾಥ್, ಇದಕ್ಕೆಂದೇ ಕೋಟ್ಯಾಂತರ ರೂ. ಖರ್ಚು ಮಾಡಿದ್ದಾರೆ.

ವೆಚ್ಚದ ಬಗ್ಗೆ ಯಾವತ್ತೂ ಲೆಕ್ಕವಿಡದ ವಿಶ್ವನಾಥ್, ಕರೆನ್ಸಿ ಸಂಗ್ರಹವೊಂದು ಕಲೆ ಎಂದು ಹೇಳಿಕೊಳ್ಳುತ್ತಾರೆ.

ಹೀಗಿದ್ದಾಗ ಕಲೆಗೆ ಬೆಲೆ ಇರಲ್ಲ, ಲೆಕ್ಕವಿಟ್ಟಿಲ್ಲ, ಆದರೆ ಬಹಳಷ್ಟು ಖರ್ಚಾಗಿದೆ ಅಂತ ವಿಶ್ವನಾಥ್ ಹೇಳುತ್ತಾರೆ.