20-12-2023

ಗುರುವಾರ ಪ್ರಧಾನಿ ಮೋದಿ ಭೇಟಿಯಾಗಲಿರುವ ಜೆಡಿಎಸ್ ನಿಯೋಗ

Author: ಗಣಪತಿ ಶರ್ಮ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಶಾಸಕರು ಭೇಟಿಯಾಗಲಿದ್ದಾರೆ.

ಬಳಿಕ ಮೋದಿ ಜತೆ ದೇವೇಗೌಡ, ಹೆಚ್​ಡಿಕೆ ಪ್ರತ್ಯೇಕ ಚರ್ಚೆ ನಡೆಸುವ ಸಾಧ್ಯತೆ ಇದೆ.

ಸೀಟು ಹಂಚಿಕೆ, ಚುನಾವಣೆ ಎದುರಿಸುವ ಸಂಬಂಧ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ ಇಂದೇ ದೆಹಲಿಗೆ ತೆರಳುತ್ತಿದ್ದಾರೆ.

ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.

5 ರಿಂದ 7 ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಒಲವು ಹೊಂದಿದ್ದಾರೆ ಎನ್ನಲಾಗಿದೆ.

ಏಳು ಕ್ಷೇತ್ರಗಳಿಗೆ ಜಡಿಎಸ್​ ಬೇಡಿಕೆ ಇಡುವ ಸಾಧ್ಯತೆ ಇದೆ. ಕನಿಷ್ಠ 5 ಕ್ಷೇತ್ರಕ್ಕೆ ಪಟ್ಟುಹಿಡಿಯುವ ಸಾಧ್ಯತೆ ಇದೆ.

ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿ ಏಳು ಕ್ಷೇತ್ರದ‌ ಮೇಲೆ ಜೆಡಿಎಸ್ ಒಲವು ಹೊಂದಿದೆ ಎನ್ನಲಾಗಿದೆ.